ಆರ್ಕ್‌ಟಿಕ್ ಶಾಖದಿಂದ ಸಂಪೂರ್ಣ ಮಂಜು ನೀರು: ವಿಜ್ಞಾನಿಗಳ ಎಚ್ಚರಿಕೆ

Update: 2018-08-30 17:16 GMT

ವಾಶಿಂಗ್ಟನ್, ಆ. 30: ಆರ್ಕ್‌ಟಿಕ್‌ನ ಮೇಲ್ಮೈಯಿಂದ ಕೆಳಗೆ ಸಂಗ್ರಹಗೊಂಡಿರುವ ಶಾಖವು ಇಡೀ ವಲಯದ ಮಂಜುಗಡ್ಡೆಯನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಆರ್ಕ್‌ಟಿಕ್ ಸಮುದ್ರದ ಬದಿಗಳ ಸುತ್ತಲಿನ ಮಂಜುಗಡ್ಡೆ ಮಾತ್ರ ಕರಗುವುದಲ್ಲ ಎನ್ನುವುದನ್ನು ‘ಸಯನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ತಿಳಿಸಿದೆ.

ನೂರಾರು ಮೈಲಿ ದೂರದಲ್ಲಿ ಹುಟ್ಟಿಕೊಂಡಿರುವ ಬಿಸಿ ನೀರು ಆರ್ಕ್‌ಟಿಕ್‌ನ ತೀರಾ ಒಳಭಾಗವನ್ನು ಪ್ರವೇಶಿಸಿದೆ ಎನ್ನುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಮಂಜುಗಡ್ಡೆಯ ಕರಗುವಿಕೆ ಅಳೆಯಲು ನಾಸಾದಿಂದ ಬಾಹ್ಯಾಕಾಶ ಉಪಕರಣ

ಭೂಮಿಯ ಧ್ರುವೀಕೃತ ಮಂಜುಗಡ್ಡೆಯ ಎತ್ತರದಲ್ಲಾಗುವ ಬದಲಾವಣೆಗಳನ್ನು ಅಳೆಯಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮುಂದಿನ ತಿಂಗಳು ಅತ್ಯಂತ ಸುಧಾರಿತ ಲೇಸರ್ ಉಪಕರಣವೊಂದನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಿದೆ.

ಈ ಉಪಕರಣವು ಭೂಮಿಯ ಧ್ರುವಗಳಲ್ಲಿ ಶೇಖರಗೊಂಡಿರುವ ಮಂಜಿನ ವಿವರಗಳನ್ನು ಸ್ಪಷ್ಟವಾಗಿ ನೀಡುತ್ತದೆ.

‘ಐಸ್, ಕ್ಲೌಡ್ ಆ್ಯಂಡ್ ಎಲವೇಶನ್ ಸ್ಯಾಟಲೈಟ್-2’ (ಐಸ್‌ಸ್ಯಾಟ್-2) ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್‌ಕ್ಟಿಕದಲ್ಲಿರುವ ಮಂಜಿನ ಎತ್ತರದಲ್ಲಾಗುವ ವಾರ್ಷಿಕ ಸರಾಸರಿ ಬದಲಾವಣೆಯನ್ನು ಪೆನ್ಸಿಲ್ ಮೊನೆಯವರೆಗಿನ ನಿಖರತೆಯಲ್ಲಿ ಲೆಕ್ಕಹಾಕುತ್ತದೆ. ಅದು ಪ್ರತಿ ಸೆಕೆಂಡ್‌ಗೆ 60,000 ಅಳತೆಗಳನ್ನು ತೆಗೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News