‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಕಾನೂನು ಆಯೋಗ ಅನುಮೋದನೆ

Update: 2018-08-30 17:36 GMT

ಹೊಸದಿಲ್ಲಿ, ಆ. 30: ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಮೂಲಕ ದೇಶದಲ್ಲಿ ನಿರಂತರ ಚುನಾವಣೆ ನಡೆಯುವುದನ್ನು ತಡೆಯಬಹುದು ಎಂದು ಕಾನೂನು ಆಯೋಗ ಗುರುವಾರ ತನ್ನ ಕರಡು ವರದಿಯಲ್ಲಿ ಹೇಳಿದೆ. ಈ ಮಹತ್ ಬದಲಾವಣೆಯನ್ನು ಕಾರ್ಯರೂಪಕ್ಕೆ ತರಲು ಆಯೋಗ ಚುನಾವಣಾ ಕಾನೂನು ಹಾಗೂ ಸಂವಿಧಾನದಲ್ಲಿ ಕೆಲವೊಂದು ಬದಲಾವಣೆಗೆ ಶಿಫಾರಸು ಮಾಡಿದೆ. ಲೋಕಸಭೆ ಹಾಗೂ ವಿಧಾನ ಸಭೆ (ಜಮ್ಮು ಹಾಗೂ ಕಾಶ್ಮೀರ ರಾಜ್ಯ ಹೊರತುಪಡಿಸಿ) ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದು ಕಾನೂನು ಸಚಿವಾಲಯಕ್ಕೆ ಸಲ್ಲಿಸಲಾದ ಕರಡು ವರದಿ ಹೇಳಿದೆ. ಏಕಕಾಲದಲ್ಲಿ ನಡೆಸುವುದರಿಂದ ಸಾರ್ವಜನಿಕರ ಹಣ ಉಳಿಸಬಹುದು. ಆಡಳಿತ ಹಾಗೂ ಭದ್ರತಾ ಪಡೆಗೆ ಹೊರೆ ತಪ್ಪುತ್ತದೆ. ಸರಕಾರ ನೀತಿಗಳ ಉತ್ತಮ ಅನುಷ್ಠಾನದ ಖಾತರಿ ನೀಡುತ್ತದೆ.

ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ದೇಶದ ಆಡಳಿತ ಯಂತ್ರ ನಿರಂತರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಸಂಕೀರ್ಣ ಸಮಸ್ಯೆ ಒಳಗೊಂಡಿರುವ ಕಾರಣಕ್ಕೆ ಎಲ್ಲ ಭಾಗೀದಾರರೊಂದಿಗೆ ಚರ್ಚೆ ಅತ್ಯಗತ್ಯ ಎಂದು ಕಾನೂನು ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News