×
Ad

ಅಳೇಕಲ ಮದನಿ ಪ್ರೌಢಶಾಲೆಗೆ ಕುಡಿಯುವ ನೀರಿನ ಘಟಕ ಕೊಡುಗೆ

Update: 2018-08-30 23:23 IST

ಉಳ್ಳಾಲ, ಆ. 30:  ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ  ನಡೆಯುವ "ಸ್ವಚ್ಛ ಮಂಗಳೂರು ಅಭಿಯಾನ" ದ ಪ್ರಯುಕ್ತ ಉಳ್ಳಾಲದ ಅಳೇಕಲ ಮದನಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯನ್ನು ನೀಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಪಂಡಿತ್ ಮೊಹಮ್ಮದ್ ಘಟಕಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಪ್ರೌಢಶಾಲಾ ವಿಭಾಗದ ಸಂಚಾಲಕ ಯು.ಎನ್ ಇಬ್ರಾಹಿಂ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಅಧ್ಯಾಪಕ ಪಿ.ಡಿ. ಶೆಟ್ಟಿ ಸ್ವಾಗತಿಸಿದರೆ, ಅಧ್ಯಾಪಕಿ ಪ್ರಜ್ಞಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News