×
Ad

ಕ್ಯಾಂಪಸ್ ಕರಿಯರ್ ಅಕಾಡಮಿಯಿಂದ ‘ನಮ್ಮ ಗೌರಿ’ ಚಿತ್ರ ಪ್ರದರ್ಶನ

Update: 2018-08-30 23:31 IST

ಮಂಗಳೂರು, ಆ.30: ಸ್ಟೇಟ್‌ಬ್ಯಾಂಕ್ ಸಮೀಪದ ಅಲ್‌ರಹಬಾ ಫ್ಲಾಝಾದ ಕ್ಯಾಂಪಸ್ ಕರಿಯರ್ ಅಕಾಡಮಿಯಲ್ಲಿ ಗುರುವಾರ ‘ನಮ್ಮ ಗೌರಿ ಚಿತ್ರ ಪ್ರದರ್ಶನ’ ನಡೆಯಿತು.

ಚಿತ್ರ ಪ್ರದರ್ಶನದ ಬಳಿಕ ನಡೆದ ‘ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ’ ವಿಚಾರ ಸಂಕಿರಣದಲ್ಲಿ ಕಾರ್ಯಕ್ರಮವನ್ನು ಡಾ.ವಾಸುದೇವ ಬೆಳ್ಳೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಂಕಣಕಾರ ಸುರೇಶ್ ಭಟ್ ಬಾಕ್ರಬೈಲ್, ಪತ್ರಕರ್ತೆ ಶಹನಾಝ್ ಎಂ., ಪ್ರವೀಣ್ ಶೆಟ್ಟಿ, ವಿಲ್ಸನ್ ಕಟೀಲ್, ಡಾ.ಸೋಮಣ್ಣ, ಡಾ.ಶಶಿಕಾಂತ್, ಕಿಶೋರ್ ಅತ್ತಾವರ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಮರ್ ಯು.ಎಚ್. ಸ್ವಾಗತಿಸಿದರು. ಗೌರಿ ಲಂಕೇಶ್ ಬಳಗದ ಸಂಚಾಲಕ ಇಸ್ಮತ್ ಫಜೀರ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News