ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಗೂಡಿನಬಳಿಯ ಯುವಕರ ತಂಡ
Update: 2018-08-31 19:52 IST
ಬಂಟ್ವಾಳ, ಆ. 31: ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೋರ್ವರನ್ನು ಸ್ಥಳೀಯ ಈಜುಗಾರರು ರಕ್ಷಿಸಿದ ಘಟನೆ ಗೂಡಿನಬಳಿಯಲ್ಲಿ ಶುಕ್ರವಾರ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಕಕ್ಯೆಪದವು ಆರೊಟು ನಿವಾಸಿ ಲಕ್ಷ್ಮಣ ದಾಸಯ್ಯ (58) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯ ಆಸ್ಪತ್ರೆಯ ಶುಲ್ಕ ಭರಿಸಲಾಗದೆ ಹಾಗೂ ಜೀವನದಲ್ಲಿ ಜಿಗುಪ್ಸೆಗೊಂಡ ಲಕ್ಷ್ಮಣ, ಶುಕ್ರವಾರ ಪಾಣೆಮಂಗಳೂರಿನ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರು ನದಿಗೆ ಹಾರುವುದನ್ನು ಕಂಡ ಗೂಡಿನಬಳಿಯ ನಿವಾಸಿಗಳಾದ ಇಬ್ರಾಹೀಂ, ಅಕ್ಬರ್, ಅಬೀವುಲ್ಲಾ, ಹಂಝ, ರಾಝಿಕ್, ಉಬೈದುಲ್ಲಾ ಅವರು ಕೂಡಲೇ ನದಿಗೆ ಹಾರಿ ಲಕ್ಷ್ಮಣ ಅವರನ್ನು ರಕ್ಷಣೆ ಮಾಡಿ, ಬಳಿಕ ಬಂಟ್ವಾಳ ನಗರ ಠಾಣೆಗೆ ಕರೆದು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.