×
Ad

ಸಕಲೇಶಪುರ- ಸುಬ್ರಹ್ಮಣ್ಯ ನಿರಂತರ ಭೂಕುಸಿತ: ಸೆ.15ರವರೆಗೆ ರೈಲು ಸಂಚಾರ ರದ್ದು

Update: 2018-08-31 20:05 IST
ಸಕಲೇಶಪುರ- ಸುಬ್ರಹ್ಮಣ್ಯ ಮಾರ್ಗದ ಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಇಲಾಖೆಯಿಂದ ರೈಲು ಹಳಿಗಳನ್ನು ಜೋಡಿಸುವ ಕಾರ್ಯ ಭರದಿಂದ ಸಾಗುತ್ತಿರುವುದು.

ಮಂಗಳೂರು, ಆ.31: ಸಕಲೇಶಪುರ- ಸುಬ್ರಹ್ಮಣ್ಯ ಮಾರ್ಗದ ಘಾಟ್‌ನಲ್ಲಿ ನಿರಂತರ ಭೂಕುಸಿತಗಳು ಸಂಭವಿಸುತ್ತಿವೆ. ರೈಲು ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ದಕ್ಷಿಣ ಪಶ್ಚಿಮ ರೈಲ್ವೆ(ಎಸ್‌ಡಬ್ಲ್ಯೂಆರ್) ವಿಭಾಗದಲ್ಲಿ ಸೆ.15ರವರೆಗೆ ರೈಲು ಸಂಚಾರ ರದ್ದುಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಿಂದ ನಿರ್ಗಮಿಸುವ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ (16517/16523) ರೈಲನ್ನು ಸೆ. 2, 3, 4, 9, 10, 11 ರಂದು ರದ್ದುಗೊಳಿಸಲಾಗಿದೆ. ಅದೇ ಮಾರ್ಗದಲ್ಲಿ ತೆರಳುವ ಕೆಎಸ್‌ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ (16511/16513) ರೈಲನ್ನು ಸೆ.1, 5, 6, 7, 8, 12, 13, 14 ರಂದು ರದ್ದುಗೊಳಿಸಲಾಗಿದೆ.

ಕಣ್ಣೂರು/ಕಾರವಾರ ರೈಲು ನಿಲ್ದಾಣದಿಂದ ತೆರಳಲಿರುವ ಕಣ್ಣೂರು/ಕಾರವಾರ-ಕೆಎಸ್‌ಆರ್ ಎಕ್ಸ್‌ಪ್ರೆಸ್ (16512/16514) ಟ್ರೇನ್‌ನ್ನು ಸೆ. 2, 3, 4, 5, 9, 10, 11, 12 ರಂದು ರದ್ದುಗೊಳಿಸಲಾಗಿದೆ. ಅದೇ ಮಾರ್ಗದಲ್ಲಿ ತೆರಳುವ ಕಣ್ಣೂರು/ಕಾರವಾರ-ಕೆಎಸ್‌ಆರ್ ಎಕ್ಸ್‌ಪ್ರೆಸ್ (16518/16524) ಟ್ರೇನ್‌ನ್ನು ಸೆ.6, 7, 8, 13, 14, 15 ರಂದು ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು

ಯಶವಂತಪುರದಿಂದ ತೆರಳಲಿರುವ ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (16575) ರೈಲು ಸೆ.2, 4, 6, 9, 11, 13 ರಂದು ಹಾಸನ ಮತ್ತು ಮಂಗಳೂರು ಜಂ. ನಡುವೆ ಭಾಗಶಃ ರದ್ದಾಗುವ ಸಾಧ್ಯತೆಯಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ (16515) ರೈಲು ಸೆ.3, 5, 7, 10, 12, 14ರಂದು ಹಾಸನ ಮತ್ತು ಕಾರವಾರದ ನಡುವೆ ಭಾಗಶಃ ರದ್ದಾಗುವ ಸಾಧ್ಯತೆಯಿದೆ.

ಮಂಗಳೂರುನಿಂದ ತೆರಳಲಿರುವ ಮಂಗಳೂರು ಜಂ. -ಯಶವಂತಪುರ ಎಕ್ಸ್‌ಪ್ರೆಸ್ (16576) ರೈಲು ಸೆ. 3, 5, 7, 10, 12, 14 ರಂದು ಮಂಗಳೂರು ಮತ್ತು ಹಾಸನ ಮಧ್ಯೆ ಭಾಗಶಃ ರದ್ದಾಗುವ ಸಾಧ್ಯತೆಯಿದೆ. ಹಾಗೆಯೇ ಕಾರವಾರ ರೈಲು ನಿಲ್ದಾಣದಿಂದ ತೆರಳಲಿರುವ ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ (16516) ಟ್ರೇನ್ ಸೆ. 4, 6, 8, 11, 13, 15ರಂದು ಕಾರವಾರ-ಹಾಸನ ಮಾರ್ಗ ಮಧ್ಯೆ ಭಾಗಶಃ ರದ್ದಾಗುವ ಸಾಧ್ಯತೆಯಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಶೇಷ ರೈಲು ಸಂಚಾರ

ಹಾಸನ ಟ್ರೇನ್ (16515)ನ ನಿಗದಿತ ಸಮಯದಲ್ಲಿ ಯಶವಂತಪುರ- ಹಾಸನ ಜನ್ ಸದರನ್ ವಿಶೇಷ ರೈಲು (06515) ಸೆ. 8, 15ರಂದು ಸಂಚರಿಸಲಿದೆ. ಹಾಸನ ರೈಲು ನಿಲ್ದಾಣದಿಂದ ತೆರಳಲಿರುವ ಹಾಸನ-ಯಶವಂತಪುರ ಟ್ರೇನ್ (16576 ) ನಿಗದಿತ ಸಮಯದಲ್ಲಿ ಹಾಸನ- ಯಶವಂತಪುರ ಜನ್ ಸದರನ್ ವಿಶೇಷ ರೈಲು ಸೆ.2, 9 ರಂದು ಪ್ರಯಾಣ ಬೆಳೆಸಲಿದೆ.

​ಫೋಟೋ: ಟ್ರೇನ್
ಕ್ಯಾಪ್ಶನ್: 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News