×
Ad

ಪ್ರತಿಭೆ ಅನಾವರಣಗೊಳಿಸಿ ಬದುಕಿನಲ್ಲಿ ಯಶಸ್ವಿಯಾಗಿ: ಬೋಳಾರ್

Update: 2018-08-31 20:41 IST

ಉಡುಪಿ, ಆ.31: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಾಕಷ್ಟು ಮಹತ್ವ ನೀಡಬೇಕು. ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಸಿಕ್ಕಿದ ಅವಕಾಶದಲ್ಲಿ ಉತ್ತಮ ವಾಗಿ ಅನಾವರಣಗೊಳಿಸಿ ಬದಕಿನಲ್ಲಿ ಬೆಳೆಯಬೇಕು ಎಂದು ತುಳು ಚಿತ್ರನಟ, ಕಲಾವಿದ ಅರವಿಂದ ಬೋಳಾರ್ ಹೇಳಿದ್ದಾರೆ.

 ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಪ್ರತಿಭಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಸುಬ್ರಹ್ಮಣ್ಯ ಜೋಶಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಪ್ರೊ.ಅನ್ನಮ್ಮ ಹಾಗೂ ಡಾ. ಹೆರಾಲ್ಡ್ ಮೊನಿಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜ್ವಲ್ ಯು. ಉಪಸ್ಥಿತರಿ ದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಸ್ವಾಗತಿಸಿ, ಸಂಘದ ಕಾರ್ಯ ದರ್ಶಿ ಲುಕ್ಮನ್ ಹಕೀಂ ವಂದಿಸಿದರು. ಆ್ಯರಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News