​ಸೆ.5: ಶಿರೂರಿನಲ್ಲಿ ಶಿರೂರುಶ್ರೀ ಆರಾಧನೆ

Update: 2018-08-31 15:24 GMT

ಉಡುಪಿ, ಆ.31: ಇತ್ತೀಚೆಗೆ ನಿಧನರಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರ ಆರಾಧನೋತ್ಸವವನ್ನು ಸೆ. 5ರಂದು ಹಿರಿಯಡ್ಕ ಸಮೀಪದ ಶಿರೂರು ಮೂಲಮಠ ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ಏಕಕಾಲದಲ್ಲಿ ನಡೆಸಲಾಗುವುದು ಎಂದು ಪರ್ಯಾಯ ಶ್ರೀಪಲಿಮಾರು ಮಠ, ಶ್ರೀ ಶಿರೂರು ಮಠ ಮತ್ತು ಸೋದೆ ಮಠದ ಸಂಯುಕ್ತ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಅಂದು ಬೆಳಗ್ಗೆ ಶಿರೂರಿನಲ್ಲಿ ಮುಖ್ಯಪ್ರಾಣ ದೇವರಿಗೆ ಕಲಶಾಭಿಷೇಕ, ವಿವಿಧ ಹೋಮಗಳನ್ನು ನಡೆಸಿ ಅದರ ಪ್ರಸಾದವನ್ನು ಅಗಲಿದ ಶ್ರೀಲಕ್ಷ್ಮೀವರತೀರ್ಥರ ವೃಂದಾವನಕ್ಕೆ ಸಮರ್ಪಿಸಲಾಗುತ್ತದೆ.

ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠಾಧೀಶರು ವಿಶೇಷ ಪೂಜೆಯನ್ನು ಸಲ್ಲಿಸಲಿದ್ದಾರೆ. ದೂರದೂರುಗಳಿಂದ ಬರುವ ಭಕ್ತರ ಅನುಕೂಲ ಕ್ಕಾಗಿ ಅಂದು ಅಪರಾಹ್ನ 1:00 ಗಂಟೆಗೆ ಶಿರೂರು ಮೂಲಮಠದಲ್ಲಿ ಮತ್ತು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏಕಕಾಲದಲ್ಲಿ ಸಾರ್ವಜನಿಕ ಸಂತರ್ಪಣೆ ಯನ್ನು ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News