ಚುನಾವಣೆ: ಮತ ಎಣಿಕೆಗೆ ನಿಷೇದಾಜ್ಞೆ

Update: 2018-08-31 15:37 GMT

ಉಡುಪಿ, ಆ.31: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಮತದಾನದ ಮತಗಳ ಎಣಿಕೆಯು ಸೆ.3ರ ಸೋಮವಾರದಂದು ಉಡುಪಿ ಕುಂಜಿಬೆಟ್ಟಿನ ಟಿ.ಎ.ಪೈಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಮಿನಿ ವಿಧಾನಸೌಧದ ತಾಲೂಕು ಕಚೇರಿ ಕೋರ್ಟ್ ಹಾಲ್ ಹಾಗೂ ಕಾರ್ಕಳ ಮಿನಿ ವಿಧಾನಸೌಧದ ತಾಲೂಕು ಕಚೇರಿ ಹಾಲ್ ಗಳಲ್ಲಿ ನಡೆಯಲಿದೆ.

ಮತ ಎಣಿಕೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.3ರ ಬೆಳಗ್ಗೆ 6ರಿಂದ ಸೆ.4ರ ಬೆಳಗ್ಗೆ 6ಗಂಟೆಯವರೆಗೆ ಸೆಕ್ಷನ್ 144ರಂತೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

ಮತಯಂತ್ರಗಳಿಗೆ ಭದ್ರತೆ:  ಶುಕ್ರವಾರ ಮತದಾನ ಮುಗಿದ ಬಳಿಕ ಮತಯಂತ್ರಗಳನ್ನು ಭದ್ರವಾಗಿರಿಸಲು ಭದ್ರತಾ ಕೊಠಡಿಗಳನ್ನು ವ್ಯವಸ್ಥೆ ಗೊಳಿಸಲಾಗಿದೆ. ಉಡುಪಿ ನಗರಸಭೆಯ ಮತಯಂತ್ರಗಳನ್ನು ಟಿ.ಎ.ಪೈ. ಆಂಗ್ಲ ಮಾಧ್ಯಮ ಶಾಲೆ ಕುಂಜಿಬೆಟ್ಟುನಲ್ಲಿ, ಕುಂದಾಪುರ ಪುರಸಭೆಯ ಮತಯಂತ್ರ ಗಳನ್ನು ಕುಂದಾಪುರ ಮಿನಿ ವಿಧಾನಸೌಧದ ತಾಲೂಕು ಕಚೇರಿ, ಕಾರ್ಕಳ ಪುರಸಭೆಯ ಮತಯಂತ್ರಗಳನ್ನು ಕಾರ್ಕಳ ಮಿನಿ ವಿಧಾನಸೌಧದ ತಾಲೂಕು ಕಚೇರಿಯಲ್ಲಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮತಯಂತ್ರ ಗಳನ್ನು ಟಿ.ಎ.ಪೈ. ಆಂಗ್ಲ ಮಾಧ್ಯಮ ಶಾಲೆ ಕುಂಜಿಬೆಟ್ಟುನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News