ಉಡುಪಿ: 4: ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ನಾಟಕ ಪ್ರದರ್ಶನ

Update: 2018-08-31 15:39 GMT

ಉಡುಪಿ, ಆ.31: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಾಂಧಿ- 150ರ ಪ್ರಯುಕ್ತ ರಾಜ್ಯದಾದ್ಯಂತ ಸಂಚರಿಸುತ್ತಿರುವ ಒಂದು ರಂಗ ಪಯಣ ಸೆ.4ರಂದು ಉಡುಪಿಗೆ ಆಗಮಿಸಲಿದೆ.

ಈ ಪಯಣದಲ್ಲಿ ಬೊಳುವಾರು ಮಹಮ್ಮದ್ ಕುಂಞ ಅವರ ಪ್ರಸಿದ್ಧ ಕಾದಂಬರಿ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ಯ ನಾಟಕ ರೂಪಾಂತರ ಖ್ಯಾತ ನಿರ್ದೇಶಕರಾದ ಡಾ. ಶ್ರೀಪಾದ್ ಭಟ್ ನಿದೇಶರ್ನದಲ್ಲಿ ಪ್ರದರ್ಶನ ಗೊಳ್ಳಲಿದೆ.

ಸೆ.4ರಂದು ಮಂಗಳವಾರ ಬೆಳಗ್ಗೆ 10:30ಕ್ಕೆ ಕಟಪಾಡಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಬಾಲ ರಂಗ ಮಕ್ಕಳ ನಾಟಕ ಶಾಲೆಯ ಆಶ್ರಯದಲ್ಲಿ, ಅಪರಾಹ್ನ 3 ಕ್ಕೆ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನೂತನ ರವೀಂದ್ರ ಮಂಟಪದಲ್ಲಿ ವಿದ್ಯಾರ್ಥಿಗಳಿಗಾಗಿ ಈ ನಾಟಕದ ಪ್ರದರ್ಶನವಿದೆ. ಸಂಜೆ 5:30ಕ್ಕೆ ಅಲ್ಲೇ ಸಾರ್ವಜನಿಕರಿಗಾಗಿ ಈ ನಾಟಕದ ಮರು ಪ್ರದರ್ಶನ ನಡೆಯಲಿದೆ.

ಸಾರ್ವಜನಿಕ ಪ್ರದರ್ಶನಕ್ಕೆ ಮುನ್ನ ‘ಗಾಂಧಿ ಚಿಂತನೆ ಪ್ರಸ್ತುತತೆ’ ವಿಷಯದ ಕುರಿತು ಸಂವಾದ ನಡೆಯಲಿದೆ. ಈ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ವೈದೇಹಿ, ಚಿಂತಕ ಕೆ. ಫಣಿರಾಜ್, ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕರಾದ ವಿನೀತ್ ರಾವ್ ಭಾಗವಹಿಸಲಿದ್ದಾರೆ.

 ಆಸಕ್ತರು ಅಧಿಕ ಸಂಖ್ಯೆಯಲ್ಲಿ ಬಂದು ಈ ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸ್ಥಳೀಯ ಸಂಘಟಕರಾದ ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ.ಮುರಳೀಧರ ಉಪಾದ್ಯ ಹಿರಿಯಡ್ಕ ಹಾಗೂ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News