ಸೌಜನ್ಯ ಮಹಿಳಾ ಮಂಡಳಿಯಿಂದ ಜನಜಾಗೃತಿ ಕಾರ್ಯಕ್ರಮ

Update: 2018-08-31 15:54 GMT

ಮಂಗಳೂರು, ಆ.31: ಯಾವುದೇ ಜನ ಜಾಗೃತಿ ಕಾರ್ಯಕ್ರಮ ಯಶಸ್ಸು ಪಡೆಯುವುದು ಪಡೆದ ಮಾಹಿತಿ ಅನುಷ್ಠಾನಗೊಂಡಾಗ ಮಾತ್ರ ಎಂದು ಎಯ್ಯಾಡಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಎಸ್.ಜಿ. ಹೆಗ್ಡೆ,ಅಭಿಪ್ರಾಯಪಟ್ಟರು.

ಸೌಜನ್ಯ ಮಹಿಳಾ ಮಂಡಳದ ವತಿಯಿಂದ ನಗರದ ಉರ್ವಸ್ಟೋರ್‌ನ ಮಾನಸ ಮಂಟಪದಲ್ಲಿ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು, ನಿರ್ವಹಣೆ ಮತ್ತು ಬದಲಿ ವಸ್ತುಗಳು ಬಗ್ಗೆ ಏರ್ಪಡಿಸಲಾದ ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಪೊರೇಟರ್ ರಾಧಾಕೃಷ್ಣ, ಸಂಘದ ಗೌರವಾಧ್ಯಕ್ಷೆ ಕೆ.ಎ.ರೋಹಿಣಿ ಉರ್ವಸ್ಟೋರ್‌ನ ಶಾರದಾ ಪೂಜಾ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿದರು. ಮಂಡಳಿಯ ಅಧ್ಯಕ್ಷೆ ಮನೋರಮಾ ಉಮೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರೀನ್ ವರ್ಲ್ಡ್ ಇನಿಷಿಯೇಟೀವ್ ಅಧ್ಯಕ್ಷೆ ಜೇಷ್ಠಲಕ್ಷ್ಮೀ ಬೋಳೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕಿ ಗಾಯತ್ರಿ ಉಡುಪ ಕಿನ್ನಿಗೋಳಿ ಅವರನ್ನು ಗೌರವಿಸಲಾಯಿತು. ಮಂಡಳಿಯ ಪದಾಧಿಕಾರಿಗಳಾದ ಶೋಭಾ ಬಿ.ಎಸ್, ಗಾಯತ್ರಿ ಬಿ.ಎಸ್., ಸುಮನಾ ಆರ್.ಎಸ್., ಪದ್ಮಜಾ ರಾವ್, ರಾಜೇಶ್ವರಿ ಎಸ್.ರಾವ್, ಸರೋಜಿನಿ ರಾವ್ ಪಾಲ್ಗೊಂಡಿದ್ದರು. ಆಕೃತಿ ಐ.ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು. ಕೆ. ನಳಿನಿ ಮೋಹನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News