ನೇಪಾಳದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ

Update: 2018-08-31 17:08 GMT

ಕಠ್ಮಂಡು, ಆ. 31: ಇಲ್ಲಿ ನಡೆಯುತ್ತಿರುವ 4ನೇ ‘ಬಿಮ್‌ಸ್ಟೆಕ್’ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿಯನ್ನು ಭೇಟಿಯಾದರು.

ಆರ್ಥಿಕ ಮತ್ತು ವ್ಯಾಪಾರ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುವುದು ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯದ ಎಲ್ಲ ಅಂಶಗಳನ್ನು ಬಗ್ಗೆ ಉಭಯ ನಾಯಕರು ವಿಸ್ತೃತ ಮಾತುಕತೆ ನಡೆಸಿದರು.

ಇದು ಈ ವರ್ಷದಲ್ಲಿ ಉಭಯ ನಾಯಕರ ನಡುವೆ ನಡೆದ ಮೂರನೇ ಸಭೆಯಾಗಿದೆ. ಈ ಮೊದಲು ಎಪ್ರಿಲ್‌ನಲ್ಲಿ ಒಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಹಾಗೂ ಮೇ ತಿಂಗಳಲ್ಲಿ ಮೋದಿ ನೇಪಾಳ ಪ್ರವಾಸ ಕೈಗೊಂಡಿದ್ದಾಗ ಅವರು ಪರಸ್ಪರ ಭೇಟಿಯಾಗಿದ್ದರು.

‘‘ಭಾರತ-ನೇಪಾಳ ಸಂಬಂಧದ ಎಲ್ಲ ಅಂಶಗಳ ಬಗ್ಗೆ ನಾವು ಮಾತುಕತೆ ನಡೆಸಿದೆವು’’ ಎಂದು ಸಭೆಯ ಬಳಿಕ ಮಾತನಾಡಿದ ಮೋದಿ ಹೇಳಿದರು.

‘ಬಿಮ್‌ಸ್ಟೆಕ್’ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಮೋದಿ ಥಾಯ್ಲೆಂಡ್ ಮತ್ತು ಬಾಂಗ್ಲಾದೇಶಗಳ ಮುಖ್ಯಸ್ಥರೊಂದಿಗೂ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು.

‘ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಕೋಪರೇಶನ್ (ಬಿಮ್‌ಸ್ಟೆಕ್)’ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಳಗಳನ್ನೊಳಗೊಂಡ ಪ್ರಾದೇಶಿಕ ಸಂಘಟನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News