ಯುವತಿ ನಾಪತ್ತೆ
Update: 2018-08-31 23:14 IST
ಬಂಟ್ವಾಳ, ಆ. 31: ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮೊಡಂಕಾಪು ಗಾಂದೋಡಿಯ ಪರಾರಿ ನಿವಾಸಿ ಮಮತಾ (26) ನಾಪತ್ತೆಯಾದ ಯುವತಿ.
ಮಮತಾ ಅವರು ಚಿಕ್ಕಮಗಳೂರುವಿನಲ್ಲಿರುವ ತನ್ನ ಪತಿಯ ಮನೆಗೆ ತೆರಳುತ್ತೇನೆ ಎಂದು ಮನೆಮಂದಿಯಲ್ಲಿ ತಿಳಿಸಿ ಹೋದವರು, ಚಿಕ್ಕಮಗಳೂರಿನಲ್ಲಿರುವ ಪತಿಯ ಮನೆಗೆ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ಮಮತಾ ಅವರ ತಂದೆ ಕೃಷ್ಣಾ ಆಚಾರ್ಯ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.