ಪೊಲೀಸರೇ ಪತ್ರ ಸೃಷ್ಟಿಸಿದ್ದಾರೆ: ಸುಧಾ ಭಾರದ್ವಾಜ್

Update: 2018-09-01 14:12 GMT

ಮುಂಬೈ, ಸೆ. 1: ಪತ್ರ ಪೊಲೀಸರ ಸೃಷ್ಟಿ ಎಂದು ಗೃಹಬಂಧನಕ್ಕೆ ಒಳಗಾದ ಐವರು ಸಾಮಾಜಿಕ ಹೋರಾಟಗಾರರಲ್ಲಿ ಒಬ್ಬರಾಗಿರುವ ಸುಧಾ ಭಾರದ್ವಾಜ್ ಶನಿವಾರ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ನಡೆದ ದಾಳಿಯಲ್ಲಿ ಬಂತ ಪ್ರಮುಖ ಸಾಮಾಜಿಕ ಹೋರಾಟಗಾರರಲ್ಲಿ ಸುಧಾ ಭಾರದ್ವಾಜ್ ಕೂಡ ಒಬ್ಬರು. ಈ ಹೋರಾಟಗಾರರಿಗೆ ಮಾವೋವಾದಿಗಳೊಂದಿಗೆ ನಂಟು ಇರುವ ಬಗ್ಗೆ, ಶಸ್ತ್ರಾಸ್ತ್ರ ಹೊಂದುವಲ್ಲಿ ಹಾಗೂ ಹಣಕಾಸಿನ ನೆರವು ನೀಡುವಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾವಿರಾರು ದಾಖಲೆ ಹಾಗೂ ಪತ್ರಗಳು ಸೇರಿದಂತೆ ಪ್ರಬಲ ಪುರಾವೆ ಇವೆ ಎಂಬ ಮಹಾರಾಷ್ಟ್ರ ಪೊಲೀಸರ ಪ್ರತಿಪಾದನೆಗೆ ಸುಧಾ ಭಾರದ್ವಾಜ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಪೊಲೀಸರು ಉಲ್ಲೇಖಿಸುತ್ತಿರುವ ಪತ್ರ ನಕಲಿ ಎಂದು ರಿದಾಬಾದ್‌ನಲ್ಲಿ ಗೃಹ ಬಂಧನದಲ್ಲಿ ಇರುವ ಭಾರದ್ವಾಜ್ ಹೇಳಿದ್ದಾರೆ. ತನ್ನನ್ನು ಹಾಗೂ ಇತರ ಮಾನವ ಹಕ್ಕು ಪರ ವಕೀಲರನ್ನು, ಸಾಮಾಜಿಕ ಹೋರಾಟಗಾರರನ್ನು ಹಾಗೂ ಸಂಘಟನೆಗಳನ್ನು ಅಪರಾಧಿಗಳನ್ನಾಗಿಸಲು ಪೊಲೀಸರು ಈ ಪತ್ರ ಸೃಷ್ಟಿಸಿದ್ದಾರೆ ಎಂದು ತನ್ನ ನ್ಯಾಯವಾದಿ ವೃಂದಾ ಗ್ರೋವರ್ ಮೂಲಕ ಹಂಚಿದ ಲಿಖಿತ ಹೇಳಿಕೆ ಮೂಲಕ ಭಾರದ್ವಾಜ್ ತಿಳಿಸಿದ್ದಾರೆ.

 ಶುಕ್ರವಾರ ಸಂಜೆ ಪತ್ರಿಕಾ ಗೋಷ್ಠಿ ನಡೆಸಿದ್ದ ಪುಣೆ ಪೊಲೀಸರು ಸಾಮಾಜಿಕ ಹೋರಾಟಗಾರರು ಹಾಗೂ ಮಾವೋವಾದಿಗಳ ನಡುವೆ ಪತ್ರ ವಿನಿಮಯ ನಡೆದಿದೆ. ಈ ಪತ್ರಗಳಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಘಟನೆಯ ಮಾದರಿಯಲ್ಲಿ ಮೋದಿ ರಾಜ್ ಅನ್ನು ಅಂತ್ಯಗೊಳಿಸಬೇಕು ಎಂದು ಹೇಳಲಾಗಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News