ಎಲ್‌ಎಎಚ್‌ಡಿಸಿ-ಕಾರ್ಗಿಲ್ ಚುನಾವಣೆ: ತ್ರಿಶಂಕು ಫಲಿತಾಂಶ,ಎನ್‌ಸಿ ಏಕೈಕ ದೊಡ್ಡ ಪಕ್ಷ

Update: 2018-09-01 14:21 GMT

ಶ್ರೀನಗರ,ಸೆ.1: ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿ (ಎಲ್‌ಎಎಚ್‌ಡಿಸಿ)-ಕಾರ್ಗಿಲ್‌ಗೆ ನಡೆದ ಚುನಾವಣೆಯಲ್ಲಿ ತ್ರಿಶಂಕು ಫಲಿತಾಂಶ ಹೊರಬಿದ್ದಿದ್ದು,ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ 10 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

 ಆ.27ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 8,ಪಿಡಿಪಿ 2 ಮತ್ತು ಬಿಜೆಪಿ ಒಂದು ಸ್ಥಾನಗಳನ್ನು ಗೆದ್ದಿವೆ. ಐದು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪ್ರಾಬಲ್ಯ ಮೆರೆದಿದ್ದಾರೆ.

ಮಂಡಳಿಯ 30 ಸ್ಥಾನಗಳ ಪೈಕಿ 26 ಸ್ಥಾನಗಳಿಗಾಗಿ ಚುನಾವಣೆ ನಡೆದಿದ್ದು,ನಾಲ್ಕು ಸ್ಥಾನಗಳಿಗೆ ರಾಜ್ಯ ಸರಕಾರವು ನಾಮಕರಣಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News