ಪ್ರಧಾನಿ ಹತ್ಯೆ ಸಂಚಿನ ತನಿಖೆಯಲ್ಲಿ ಎನ್‌ಐಎ, ಸಿಬಿಐ ಯಾಕಿಲ್ಲ: ಕಾಂಗ್ರೆಸ್

Update: 2018-09-01 14:22 GMT

ಹೊಸದಿಲ್ಲಿ, ಸೆ. 1: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಮಾದರಿಯಲ್ಲಿ ಮೋದಿ-ರಾಜ್ ಅನ್ನು ಅಂತ್ಯಗೊಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪದ ತನಿಖೆಯಲ್ಲಿ ದೇಶದ ಅತ್ಯುಚ್ಛ ತನಿಖಾ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಾಕೆ ಭಾಗಿಯಾಗಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಪ್ರಶ್ನಿಸಿದೆ.

 ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯುವ ಸಾಧ್ಯತೆ ಇದೆ ಎಂದು ಸಾಮಾನ್ಯ ಪ್ರಜ್ಞೆ ಹೇಳುತ್ತದೆಯೇ ?, ಈ ಹೇಳಿಕೆ ಖಂಡಿಸಿರುವ ಅವರು, ಈ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಭಾಗಿಯಾಗಿಲ್ಲ. ಇದನ್ನು ತನಿಖೆ ಮಾಡಲು ಪುಣೆ ಪೊಲೀಸ್‌ಗೆ ವಹಿಸಲು ಕಾರಣವೇನು ? ಎಂದು ಕಾಂಗ್ರೆಸ್ ವಕ್ತಾರ ಅಭಿಶೇಕ್ ಸಿಂಘ್ವಿ ಪ್ರಶ್ನಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಗೆ ವಹಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ಬಗ್ಗೆ ತನಗೆ ಆತಂಕವಾಗುತ್ತದೆ ಎಂದು ಅವರು ಹೇಳಿದ್ದಾರೆ. ಭಾರತದ ಪ್ರಧಾನ ಮಂತ್ರಿ ಮೇಲೆ ದಾಳಿ ನಡೆಸುವುದನ್ನು ಯಾರೊಬ್ಬರೂ ಸಮರ್ಥಿಸಲು ಸಾಧ್ಯವಿಲ್ಲ. ಪುಣೆ ಪೊಲೀಸರು ಭ್ರಮಾತ್ಮಕ ಲೋಕದಲ್ಲಿದ್ದಾರೆ. ತನಿಖೆಯಲ್ಲಿ ಎನ್‌ಐಎ ಕೂಡ ಕಾಣುತ್ತಿಲ್ಲ. ಸಿಬಿಐ ಕೂಡ ಕಾಣುತ್ತಿಲ್ಲ ಎಂದು ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News