×
Ad

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉಡುಪಿ ಶಾಖೆಗೆ ಚಾಲನೆ

Update: 2018-09-01 21:05 IST

ಉಡುಪಿ, ಸೆ.1: ಭಾರತೀಯ ಅಂಚೆ ಇಲಾಖೆಯು ಜನ ಸಾಮಾನ್ಯರಿಗೆ ಸುಲಭ ಹಾಗು ಸರಳ ರೀತಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಆರಂಭಿಸಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಉಡುಪಿ ಶಾಖೆ ಯನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಶನಿವಾರ ಬನ್ನಂಜೆ ನಾರಾ ಯಣಗುರು ಸಭಾಭವನದಲ್ಲಿ ಉದ್ಘಾಟಿಸಿದರು.

 ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಶೂನ್ಯ ಶಿಲ್ಕುವಿನೊಂದಿಗೆ ಖಾತೆಯನ್ನು ತೆರೆಯುವುದು ಮತ್ತು ಮನೆ ಬಾಗಿಲಲ್ಲೇ ಪೋಸ್ಟ್‌ಮ್ಯಾನ್ ಮೂಲಕ ಖಾತೆ ತೆರೆಯಬಹುದು ಹಾಗೂ ಹಣ ಪಡೆಯುವುದು ಈ ಬ್ಯಾಂಕಿಂಗ್ ವ್ಯವಸ್ಥೆಯ ಬಹಳ ಮುಖ್ಯ ಅನುಕೂಲಗಳಾಗಿವೆ ಎಂದು ಹೇಳಿದರು.

ಬ್ಯಾಂಕಿನ ಬಳಿ ಬರಲು ಕಷ್ಟವಾಗುವವರಿಗೆ ಈ ಬ್ಯಾಂಕ್ ಬಹಳಷ್ಟು ಸಹ ಕಾರಿಯಾಗಲಿದೆ. ಇದು ಉಡುಪಿ ಜಿಲ್ಲೆಗೆ ಅತ್ಯಂತ ಸೂಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಇದರ ಅನುಕೂಲವನ್ನು ಪಡೆದುಕೊಳ್ಳಬೇಕು. ಜಿಲ್ಲೆಯ ಶೇ.99ರಷ್ಟು ಮಂದಿ ಮೊಬೈಲ್ ಹೊಂದಿರುವುದರಿಂದ ಇದರಲ್ಲಿ ಬಹಳ ಸುಲಭವಾಗಿ ವ್ಯವಹರಿಸಬಹುದಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಉಪಸ್ಥಿತರಿ ದ್ದರು. ಈ ಸಂದರ್ಭದಲ್ಲಿ ಹೊಸ ಖಾತೆದಾರರಿಗೆ ಕ್ಯೂಆರ್ ಕಾರ್ಡ್‌ಗಳನ್ನು ಹಸ್ತಾಂತರಿಸಲಾಯಿತು.

ಉಡುಪಿ ಸಹಾಯಕ ಅಧೀಕ್ಷಕರಾದ ಎಸ್.ಪಿ.ರವಿ, ಶ್ರೀನಾಥ್, ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಸೂರ್ಯನಾರಾಯಣ ರಾವ್ ಸ್ವಾಗತಿಸಿದರು. ಐಪಿಪಿಬಿ ಉಡುಪಿ ಶಾಖೆಯ ವ್ಯವಸ್ಥಾಪಕ ಋತ್ವಿಕ್ ವಂದಿಸಿ ದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಜಿಲ್ಲೆಯಲ್ಲಿ ಬನ್ನಂಜೆ ಉಪ ಅಂಚೆ ಕಚೇರಿ, ಉಚ್ಚಿಲ ಉಪ ಅಂಚೆ ಕಚೇರಿ, ಬೆಳಪು ಶಾಖಾ ಅಂಚೆ ಕಚೇರಿ ಹಾಗೂ ಪಣಿಯೂರು ಶಾಖಾ ಅಂಚೆ ಕಚೇರಿಗಳಲ್ಲಿಯೂ ಬ್ಯಾಂಕಿನ ಉಪಶಾಖೆಗಳಿಗೆ ಇಂದು ಚಾಲನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News