ಮಾವೋವಾದಿಗಳು ಹಣಕಾಸು ನೆರವು ನೀಡಿದ ಸಮಾವೇಶದಲ್ಲಿ ಭಾಗಿ: ಪೊಲೀಸರ ಆರೋಪ ತಿರಸ್ಕರಿಸಿದ ತೇಲ್ತುಂಬ್ಡೆ

Update: 2018-09-01 15:43 GMT

ಮುಂಬೈ, ಸೆ. 1: ಮಾವೋವಾದಿಗಳು ಹಣಕಾಸು ನೆರವು ನೀಡಿದ ಪ್ಯಾರೀಸ್ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಹಾಗೂ ನಕ್ಸಲ್ ನಂಟಿನ ಮಹಾರಾಷ್ಟ್ರ ಪೊಲೀಸರ ಪ್ರತಿಪಾದನೆಯನ್ನು ಮಾನವ ಹಕ್ಕು ಹೋರಾಟಗಾರ ಆನಂದ ತೇಲ್ತುಂಬ್ಡೆ ಶನಿವಾರ ನಿರಾಕರಿಸಿದ್ದಾರೆ.

 ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಆಗಸ್ಟ್ 28ರಂದು ಪುಣೆ ಪೊಲೀಸರಿಂದ ದಾಳಿಗೆ ಒಳಗಾದ ಮಾನವ ಹಕ್ಕು ಹೋರಾಟಗಾರರು ಹಾಗೂ ವಕೀಲರ ಮನೆಗಳಲ್ಲಿ ಗೋವಾದ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಅಧ್ಯಾಪಕ ತೇಲ್ತುಂಬ್ಡೆ ಅವರ ನಿವಾಸ ಕೂಡ ಸೇರಿದೆ. “ಈ ಎಲ್ಲ ಆರೋಪ ನನ್ನ ವರ್ಚಸ್ಸನ್ನು ಕುಂದಿಸುವ ಪ್ರಯತ್ನ. ನನಗೆ ಯಾವುದೇ ಮಾವೋವಾದಿ ನಾಯಕರ ಬಗ್ಗೆ ಗೊತ್ತಿಲ್ಲ. ನನಗೆ ಅವರೊಂದಿಗೆ ಯಾವುದೇ ಸಂಬಂಧ ಇಲ್ಲ” ಎಂದು ತೇಲ್ತುಂಬ್ಡೆ ಹೇಳಿದ್ದಾರೆ. ‘‘ನಾನು ಶೈಕ್ಷಣಿಕ ಸಮಾವೇಶಕ್ಕಾಗಿ ವಿದೇಶಕ್ಕೆ ತೆರಳಿದ್ದೆ. ಅದು ಅಧೀಕೃತ ಆಹ್ವಾನ ಹಾಗೂ ಪ್ರತಿಯೊಂದರ ಬಗ್ಗೆ ಕೂಡ ದಾಖಲೆ ಇದೆ’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News