×
Ad

ಶ್ರೀನಿವಾಸ ಪೂಜಾರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪುರಸ್ಕಾರ

Update: 2018-09-01 22:00 IST

ಉಡುಪಿ, ಸೆ.1: ಉಡುಪಿ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಪೂಜಾರಿ ಅವರಿಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ವತಿಯಿಂದ 2018ರ ಸ್ವಾತಂತ್ರೋತ್ಸವದ ಸಂದರ್ದಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ನೀಡಿ ಗೌರವಿಸಲಾಗಿದೆ.

ಅಗ್ನಿಶಾಮಕ ದಳದಲ್ಲಿ ಚಾಲಕರಾಗಿರುವ ಶ್ರೀನಿವಾಸ ಪೂಜಾರಿ ಇವರು 1996ರಲ್ಲಿ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತುಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 2017ರಲ್ಲಿ ಉಡುಪಿ ಅಗ್ನಿ ಶಾಮಕ ಠಾಣೆಗೆ ವರ್ಗಾವಣೆಗೊಂಡ ಇವರು, ಅಗ್ನಿಕರೆ ಮತ್ತು ವಿಶೇಷ ಕರೆಗಳ ಸಂದರ್ಭ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು, ಸಾರ್ವಜನಿಕರ ಆಸ್ತಿ ಹಾಗೂ ಪ್ರಾಣ ರಕ್ಷಣೆ ಮಾಡಿದ್ದಾರೆ.

ಇವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ವತಿಯಿಂದ 2018 ರ ಸ್ವಾತಂತ್ರೋತ್ಸವದ ಸಂದರ್ದಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ನೀಡಿ ಗೌರವಿಸ ಲಾಗಿದೆ ಎಂದು ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News