×
Ad

ಸೆ. 2: ನರದಲ್ಲಿ ನೇತ್ರಾ ದಾನ ಜಾಗೃತಿ ಪಾಕ್ಷಿಕ ಆಚರಣೆ

Update: 2018-09-01 22:37 IST

ಮಂಗಳೂರು, ಸೆ.1: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ನೇತ್ರ ಚಿಕಿತ್ಸಾ ತಜ್ಞರನ್ನೊಳಗೊಂಡ ದ.ಕ ಜಿಲ್ಲಾ ನೇತ್ರ ತಜ್ಞರ ಸೊಸೈಟಿಯ ವತಿಯಿಂದ ನೇತ್ರದಾನ ಜಾಗೃತಿ ಪಾಕ್ಷಿಕ ಅಂಗವಾಗಿ ಸೆ.2ರಂದು ಐದು ಕಿಲೋಮೀಟರ್ ಓಟ ಮತ್ತು ಎರಡು ಕಿಲೋಮೀಟರ್ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಮನಪಾ ಕಚೇರಿಯ ಬಳಿಯಿಂದ ನೆಹರು ಮೈದಾನದ ವರೆಗೆ ಜಾಗೃತಿ ನಡಿಗೆ -ಓಟ ಬೆಳಗ್ಗೆ 8 ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾಗಿ ಎಂಆರ್‌ಪಿಎಲ್, ರೋಟರಿ ಇಂಟರ್ ನ್ಯಾಶನಲ್, ರೌಂಡ್ ಟೇಬಲ್, ಸಮ್‌ವಿತ್ತಿ ಕ್ಯಾಪಿಟಲ್, ಭರತ್ ಮೋಟಾರ್ಸ್‌, ಆಭರಣ ಜ್ಯುವೆಲ್ಲರ್ಸ್‌, ಮರಿಯಾನ ಬಿಲ್ಡರ್ಸ್‌ ಮತ್ತು ಜ್ಯೂಯಿಸ್ ಜಿಮ್ ಹಾಗೂ ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳ ಸಹಯೋಗ ದೊಂದಿಗೆ ನೇತ್ರಾದಾನ ಆಚರಣೆ ನಡೆಯಲಿದೆ.

ಉದ್ಘಾಟನಾ ಉದ್ಘಾಟನಾ ಕಾರ್ಯಕ್ರಮವನ್ನು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ,ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ನೇತ್ರತಜ್ಞರ ಸಂಘದ ಅಧ್ಯಕ್ಷಡಾ.ಸುಧೀರ್ ಹೆಗ್ಡೆ,ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಹರೀಶ್ ಬಾಳಿಗ,ಕರ್ನಾಟಕ ನೇತ್ರತಜ್ಞರ ಸೊಸೈಟಿಯ ಅಧ್ಯಕ್ಷ ಡಾ.ಸಾಯಿ ಗಿರಿಧರ್,ಮರಿಯಾನ ಬಿಲ್ಡರ್ಸ್‌ನಮುಖ್ಯಸ್ಥ ನವೀನ್ ಕಾರ್ಡೋಝಾ,ಸಮ್ ವಿತ್ತಿ ಕ್ಯಾಪಿಟಲ್‌ನ ಮುಖ್ಯಸ್ಥ ಪ್ರಭಾಕರ ಕುಡ್ವ,ಸುಧೀರ್ ಪೈ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News