ಪ್ರಧಾನಿ ನಿವಾಸದ ವೈಭವೋಪೇತ ಕಾರುಗಳ ಹರಾಜಿಗೆ ಪಾಕ್ ನಿರ್ಧಾರ

Update: 2018-09-01 17:19 GMT

ಇಸ್ಲಾಮಾಬಾದ್, ಸೆ. 1: ಪಾಕಿಸ್ತಾನದ ನೂತನ ಸರಕಾರವು ತನ್ನ ಮಿತವ್ಯಯ ಕಾರ್ಯಕ್ರಮದಂತೆ, ಪ್ರಧಾನಿ ನಿವಾಸದ ಹೆಚ್ಚುವರಿ ವೈಭವೋಪೇತ ವಾಹನಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಪ್ರಧಾನಿ ನಿವಾಸದಲ್ಲಿ ಸೆಪ್ಟಂಬರ್ 17ರಂದು ನಡೆಯಲಿರುವ ಹರಾಜಿನಲ್ಲಿ ವಾಹನಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಹಾಗೂ ಹರಾಜಿಗಿಡಬೇಕಾದ ವಾಹನಗಳ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ‘ಡಾನ್’ ವರದಿ ಮಾಡಿದೆ.

8 ಬಿಎಂಡಬ್ಲು ಕಾರುಗಳು, 4 2016ರ ಮರ್ಸಿಡಿಸ್ ಬೆಂಝ್ ಕಾರುಗಳು, 16 ಟೊಯೋಟ ಕಾರುಗಳು, 4 ಗುಂಡು ನಿರೋಧಕ ಲ್ಯಾಂಡ್ ಕ್ರೂಸರ್ ಕಾರುಗಳು, 1 ಹೊಂಡಾ ಸಿವಿಕ್ 1800ಸಿಸಿ ಕಾರು, 3 ಸುಝುಕಿ ಕಾರುಗಳು ಮತ್ತು 1994ರ ಹಿನೊ ಬಸ್ ಈ ಪಟ್ಟಿಯಲ್ಲಿವೆ.

ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಇಮ್ರಾನ್

ಆಗಸ್ಟ್ 18ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ, ಪ್ರಧಾನಿ ಇಮ್ರಾನ್ ಖಾನ್ ತನ್ನ ಸೇನಾ ಕಾರ್ಯದರ್ಶಿಯ ಮೂರು ಬೆಡ್‌ರೂಮ್‌ಗಳ ಸಣ್ಣ ಮನೆಯಲ್ಲಿ ಇಬ್ಬರು ಸೇವಕರೊಂದಿಗೆ ವಾಸಿಸುತ್ತಿದ್ದಾರೆ.

ಬೃಹತ್ ಪ್ರಧಾನಿ ನಿವಾಸದಲ್ಲಿ ತಾನು ವಾಸಿಸುವುದಿಲ್ಲ ಎಂದು ಅವರು ಹೇಳಿದ್ದರು. ಪ್ರಧಾನಿ ನಿವಾಸದಲ್ಲಿ 524 ಸಿಬ್ಬಂದಿ ಮತ್ತು 80 ವಾಹನಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News