×
Ad

ಸಾಲಿಗ್ರಾಮ ಪ.ಪಂ.ನ ಮಾಡೋಳಿ ವಾರ್ಡ್‌ನಲ್ಲಿ ಅತ್ಯಧಿಕ ಮತದಾನ

Update: 2018-09-01 22:51 IST

ಉಡುಪಿ, ಸೆ.1: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಮತದಾನದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 9-ಮಾಡೋಳಿ ವಾರ್ಡ್‌ನಲ್ಲಿ ಅತ್ಯಧಿಕ ಅಂದರೆ ಶೇ.86.59ರಷ್ಟು ಮತದಾನವಾಗಿದ್ದರೆ, ಉಡುಪಿ ನಗರಸಭೆಯ ಮಣಿಪಾಲ ವಾರ್ಡ್‌ನಲ್ಲಿ ಅತೀ ಕಡಿಮೆ ಅಂದರೆ ಶೇ.51.35ರಷ್ಟು ಮತದಾನವಾಗಿದೆ.

ಜಿಲ್ಲಾಧಿಕಾರಿ ಕಚೇರಿಯಿಂದ ಬಿಡುಗಡೆಯಾದ ಮಾಹಿತಿಯಂತೆ ಉಡುಪಿ ನಗರಸಭೆಗೆ ಸಂಬಂಧಿಸಿದಂತೆ ಕಲ್ಮಾಡಿ ವಾರ್ಡಿನಲ್ಲಿ ಅತ್ಯಧಿಕ ಶೇ.79.26ರಷ್ಟು ಮತದಾನವಾಗಿದ್ದರೆ, ಮಣಿಪಾಲದಲ್ಲಿ (ಶೇ.51.35) ಅತೀ ಕಡಿಮೆ ಮತದಾನ ವಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಮಾಡೋಳಿಯಲ್ಲಿ ಅತ್ಯಧಿಕ ಹಾಗೂ ಭಗವತಿ ವಾರ್ಡ್‌ನಲ್ಲಿ ಅತೀ ಕಡಿಮೆ ಶೇ.65.80ರಷ್ಟು ಮತದಾನ ವಾಗಿದೆ.

ಇನ್ನು ಕುಂದಾಪುರ ಪುರಸಭೆ ಮಟ್ಟಿಗೆ ಖಾರ್ವಿಕೇರಿಯಲ್ಲಿ ಅತೀ ಹೆಚ್ಚು ಶೇ.82.45 ಹಾಗೂ ಜೆಎಲ್‌ಬಿ ವಾರ್ಡಿನಲ್ಲಿ ಅತೀ ಕಡಿಮೆಶೇ.66.18ರಷ್ಟು ಮತದಾನವಾಗಿದೆ. ಕಾರ್ಕಳ ಪುರಸಭೆಯಲ್ಲಿ ಅತೀ ಹೆಚ್ಚು ಮತದಾನವಾಗಿ ರುವುದು 22.ಕಾಬೆಟ್ಟು ರೋಟರಿ ವಾರ್ಡಿನಲ್ಲಿ ಇಲ್ಲಿ ಶೇ.80.85ರಷ್ಟು ಹಾಗೂ ಅತಿ ಕಡಿಮೆ ಮಧ್ಯಪೇಟೆಯಲ್ಲಿ ಶೇ.56.34ರಷ್ಟು ದಾಖಲಾಗಿದೆ.

ಸಮಬಲದ ಮತದಾನ: ಜಿಲ್ಲಾ ಮಟ್ಟದಲ್ಲಿ ನೋಡುವಾಗ ಈ ಬಾರಿ ಪುರುಷರು, ಮಹಿಳೆಯರಿಗೆ ಸರಿಸಮಾನವಾಗಿ ಮತದಾನ ಮಾಡಿದ್ದಾರೆ. ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಒಟ್ಟು 1,54,428 ಮತದಾರರಲ್ಲಿ 1,08,563 ಮಂದಿ (ಶೇ.70.30)ಮತಚಲಾಯಿಸಿದ್ದಾರೆ. 74,922 ಪುರುಷ ಮತದಾರರಲ್ಲಿ 52,514 ಮಂದಿ ಮತ ಚಲಾಯಿಸುವ ಮೂಲಕ ಶೇ.70.09ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದಂತಾಗಿದೆ.

ಇನ್ನು 79,505 ಮಹಿಳಾ ಮತದಾರರಲ್ಲಿ 56,049 ಮಂದಿ ಮತಗಟ್ಟೆಗೆ ಬಂದಿದ್ದು, ಇದು ಶೇ.70.50ಯಷ್ಟಾಗಿದೆ. ಈ ಮೂಲಕ ಪುರುಷರು ಮತ್ತು ಮಹಿಳೆಯರು ಸರಿಸಮವಾಗಿ ಮತ ಹಾಕಿದಂತಾಗಿದೆ.

ಉಡುಪಿ ನಗರಸಭೆ:  ಇಲ್ಲಿನ 35 ವಾರ್ಡುಗಳಲ್ಲಿರುವ 47,538 ಪುರುಷ ಮತದಾರರಲ್ಲಿ 32,659 ಮಂದಿ ಮತ ಚಲಾಯಿಸಿ ಶೇ.68.70, 50,022 ಮಂದಿ ಮಹಿಳಾ ಮತದಾರ ರಲ್ಲಿ 34,194 ಮಂದಿ (ಶೇ.68.36) ಮತಚಲಾಯಿಸಿದ್ದಾರೆ. ಒಟ್ಟಾರೆಯಾಗಿ 97,561 ಮಂದಿ ಮತದಾರರಲ್ಲಿ 66,853 ಮಂದಿ ಮತ ಚಲಾಯಿಸಿ ಶೇ.68.52ರಷ್ಟು ಮತದಾನವಾಗಿದೆ.

ಕುಂದಾಪುರ ಪುರಸಭೆ: ಕುಂದಾಪುರದ23 ವಾರ್ಡುಗಳಲ್ಲಿರುವ 11,292 ಪುರುಷ ಮತದಾರರಲ್ಲಿ 8,331 ಮಂದಿ (ಶೇ.73.78) ಹಾಗೂ 12,010 ಮಹಿಳಾ ಮತದಾರರಲ್ಲಿ 8869 ಮಂದಿ (ಶೇ.73.85) ಮತ ಚಲಾಯಿಸಿದ್ದಾರೆ. ಒಟ್ಟಾರೆಯಾಗಿ 23,302 ಮಂದಿಯಲ್ಲಿ 17,200 ಮಂದಿ ಮತಚಲಾಯಿಸಿ ಶೇ.73.81 ಮತದಾನವಾಗಿದೆ.

ಕಾರ್ಕಳ ಪುರಸಭೆ: ಕಾರ್ಕಳ ಪುರಸಭೆಯ 23 ವಾರ್ಡುಗಳಲ್ಲಿರುವ 9,879 ಪುರುಷ ಮತದಾರರಲ್ಲಿ 6,967 ಮಂದಿ (ಶೇ.70.52) ಹಾಗೂ 10,725 ಮಹಿಳಾ ಮತದಾರರಲ್ಲಿ 7,788 ಮಂದಿ (ಶೇ.72.62) ಮತ ಚಲಾಯಿ ಸಿದ್ದಾರೆ. ಒಟ್ಟಾರೆಯಾಗಿ 20,604 ಮಂದಿಯಲ್ಲಿ 14,755 ಮಂದಿ ಮತ ಚಲಾಯಿಸಿ ಶೇ.71.61ರಷ್ಟು ಮತದಾನವಾಗಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್: ಸಾಲಿಗ್ರಾಮದ 16 ವಾರ್ಡುಗಳ ಲ್ಲಿರುವ 6,213 ಪುರುಷ ಮತದಾರರಲ್ಲಿ 4,557 ಮಂದಿ (ಶೇ.73.35) ಹಾಗೂ 6,748 ಮಹಿಳಾ ಮತದಾರರಲ್ಲಿ 5,198 ಮಂದಿ (ಶೇ.77.03) ಮತ ಚಲಾಯಿಸಿದ್ದಾರೆ. ಒಟ್ಟಾರೆಯಾಗಿ 12,961 ಮಂದಿಯಲ್ಲಿ 9,755 ಮಂದಿ ಮತಚಲಾಯಿಸಿದ್ದು ಶೇ.75.26ರಷ್ಟು ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News