ಪರಿಶ್ರಮದಿಂದ ಯಶಸ್ಸು: ಶರಫುದ್ದೀನ್ ಕುವೈತ್
Update: 2018-09-01 22:52 IST
ಮಂಗಳೂರು, ಸೆ.1: ವಿದ್ಯಾರ್ಥಿಗಳು ಕಠಿಣ ಶ್ರಮ ಹಾಗೂ ಕ್ರಿಯಾತ್ಮಕ ಪ್ರಯೋಗಗಳನ್ನು ಮಾಡುತ್ತಿರಬೇಕು. ಪ್ರತಿ ಯಶಸ್ಸಿನ ಹಿಂದೆ ಕಠಿಣ ಪರಿಶ್ರಮವಿದೆ ಎಂದು ವಾಗ್ಮಿ, ಚಿಂತಕ ಶರಫುದ್ದೀನ್ ಕುವೈತ್ ಹೇಳಿದ್ದಾರೆ.
ಪಕ್ಕಲಡ್ಕ ಬಜಾಲ್‌ನ ಸ್ನೇಹ ಪಬ್ಲಿಕ್ ಸ್ಕೂಲ್‌ನಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಸಂಚಾಲಕ ಯೂಸುಫ್ ಪಕ್ಕಲಡ್ಕ, ಷರೀಫ್ ಸುರಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯೋಪಾದ್ಯಾಯಿನಿ ನಾಗರತ್ನ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಹನಾ ಈದ್ ಕಿರಾತ್ ಪಠಿಸಿದರು. ಅಧ್ಯಾಪಕಿ ಪೌಝಿಯಾ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕಿ ಖನಿಝಾ ವಂದಿಸಿದರು.