ರಾಷ್ಟ್ರೀಯ ಮಟ್ಟದ ಈಜುಕೂಟ: ಮಂಗಳೂರಿನ ಅಭಿಷೇಕ್‌ಗೆ ಸ್ವರ್ಣ ಪದಕ
Update: 2018-09-01 22:54 IST
ಮಂಗಳೂರು, ಸೆ.1: ಪುಣೆಯಲ್ಲಿ ಡೌನ್ಸ ಸಿಂಡ್ರೋಮ್ ಮತ್ತು ಆಟಿಸ್ಟಿಕ್ ಮಕ್ಕಳಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಈಜು ಕೂಟದಲ್ಲಿ ಚಿನ್ನ ಸಹಿತ ಎರಡು ಪದಕಗಳನ್ನು ನಗರದ ಅಭಿಷೇಕ್ ಪ್ರಭು ಗೆದ್ದುಕೊಂಡಿದ್ದಾರೆ.
ರೋಟರಿ ಕ್ಲಬ್ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಈಜು ಸ್ಪರ್ಧೆಯನ್ನು ಆಯೋಜಿಸಿತ್ತು. ಪ್ರಭು 25 ಮೀಟರ್ ವಿಭಾಗದಲ್ಲಿ ಚಿನ್ನ ಮತ್ತು 50 ಮೀಟರ್ ವಿಭಾಗದಲ್ಲಿ ಕಂಚು ಪದಕ ಗೆದ್ದುಕೊಂಡಿದ್ದಾರೆ.
ಅಭಿಷೇಕ್ ಮಂಜೇಶ್ವರ ನರಸಿಂಹ ಪ್ರಭು ಮತ್ತು ಲಕ್ಷ್ಮೀ ದಂಪತಿ ಪುತ್ರ. ನಗರದ ಚೇತನ ಮಕ್ಕಳ ಅಭಿವೃದ್ಧಿ ಕೇಂದ್ರದ ವಿದ್ಯಾರ್ಥಿಯಾಗಿದ್ದಾರೆ. ಕೂಟದಲ್ಲಿ ವಿವಿಧ ರಾಜ್ಯಗಳ 200 ಮಂದಿ ಭಾಗವಹಿಸಿದ್ದರು.