ಮೇಜರ್ ಗೊಯೋಯ್ ಪ್ರಕರಣ: ಮಾನವ ಕಳ್ಳಸಾಗಾಣಿಕೆ ಆಯಾಮದ ಬಗ್ಗೆಯೂ ತನಿಖೆಗೆ ಆಗ್ರಹ

Update: 2018-09-02 07:09 GMT

ಹೊಸದಿಲ್ಲಿ, ಸೆ.2: ಮೇಜರ್ ಲೀತುಲ್ ಗೊಗೋಯ್ ಪ್ರಕರಣದಲ್ಲಿ ಮಾನವ ಕಳ್ಳಸಾಗಾಣಿಕೆ ಆಯಾಮದಲ್ಲೂ ಸಮಗ್ರವಾದ ತನಿಖೆ ನಡೆಸುವಂತೆ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಗೊಗೋಯ್ ಪ್ರಕರಣದ ಅರ್ಜಿದಾರರಾಗಿರುವ ಅಹ್ಸಾನ್ ಉಂಟೂ ಆಗ್ರಹಿಸಿದ್ದಾರೆ.

ಭಾರತೀಯ ಸೇನೆಯ ವಿಚಾರಣಾ ನ್ಯಾಯಾಲಯ, ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಸಿ ಸೆಪ್ಟೆಂಬರ್ 18ರೊಳಗೆ ಸಮಗ್ರ ವರದಿ ನೀಡುವಂತೆಯೂ ಸೂಚಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

"ಮೇಜರ್ ಗೊಗೋಯ್ ಸೃಷ್ಟಿಸಿದ ನಕಲಿ ಫೇಸ್‍ ಬುಕ್ ಐಡಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾವು ಇಂದು ವಾದ ಮಂಡಿಸಿದ್ದೇವೆ. ಪ್ರಕರಣದಲ್ಲಿ ಸಮೀರ್ ಮಾಲಾ ಅವರ ಪಾತ್ರದ ಬಗ್ಗೆಯೂ ತನಿಖೆಗೆ ಒತ್ತಾಯಿಸಿದ್ದೇವೆ. ಮಾನವ ಕಳ್ಳಸಾಗಾಣಿಕೆ ಆಯಾಮದ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಕೋರಿದ್ದೇವೆ. ನಮ್ಮ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಈ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿ 18ರೊಳಗೆ ವರದಿ ನೀಡುವಂತೆ ಸೂಚಿಸಿದೆ” ಎಂದು ಅವರು ವಿವರಿಸಿದ್ದಾರೆ.

ಇದಕ್ಕೂ ಮೊದಲು ಸೇನಾ ವಿಚಾರಣಾ ನ್ಯಾಯಾಲಯ ಶ್ರೀನಗರ ಹೋಟೆಲ್ ಪ್ರಕರಣದಲ್ಲಿ ಮೇಜಯ್ ಗೊಯೋಯ್ ಅವರನ್ನು ತಪ್ಪಿತಸ್ಥ ಎಂದು ನಿರ್ಧರಿಸಿದೆ. ಅವರ ವಿರುದ್ಧ ಸಾಕಷ್ಟು ಪುರಾವೆಗಳು ಇರುವ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News