ಟುಡೇ ಫೌಂಡೇಶನ್ ಫರಂಗಿಪೇಟೆ: ಸುಜೀರ್ ಪ್ರೌಢಶಾಲಾ ಕ್ರೀಡಾಪಟುಗಳಿಗೆ ಉಚಿತ ಕ್ರೀಡಾಸಮವಸ್ತ್ರ ವಿತರಣೆ

Update: 2018-09-02 07:18 GMT

ಬಂಟ್ವಾಳ, ಸೆ. 2: ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಸುಜೀರ್ ಪ್ರೌಢ ಶಾಲೆಯ ತ್ರೋಬಾಲ್ ಹಾಗೂ ಕಬಡ್ಡಿ ಕ್ರೀಡಾಪಟುಗಳಿಗೆ ಸುಜೀರ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ಟುಡೇ ಫೌಂಡೇಶನ್ ಫರಂಗಿಪೇಟೆ ಇದರ ಅಧ್ಯಕ್ಷ ಎಫ್ ಉಮರ್ ಫಾರೂಕ್ ಫರಂಗಿಪೇಟೆ ಅವರ ನೇತೃತ್ವದಲ್ಲಿ ಶನಿವಾರ ಉಚಿತ ಕ್ರೀಡಾಸಮವಸ್ತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಸ್ಯ ಹಾಶೀರ್ ಪೇರಿಮಾರ್ ರವರು 30 ಕಬಡ್ಡಿ ಹಾಗೂ ತ್ರೋಬಾಲ್ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿದರು.

ಟುಡೇ ಫೌಂಡೇಶನ್ ಫರಂಗಿಪೇಟೆ ಇದರ ಸದಸ್ಯರಾದ ರಫಿಕ್ ಪೇರಿಮಾರ್, ದಿರ್ಶಾದ್ ಪೇರಿಮಾರ್, ಇಮ್ತಿಯಾಝ್ ಅಲ್ಫಾ ತುಂಬೆ, ಅಸೀಫ್ ಇಕ್ಬಾಲ್, ಬದ್ರುದ್ದೀನ್ ದಮಾಮ್, ಅರೀಫ್ ಮಾರಿಪಳ್ಳ, ಇ.ಕೆ. ರವೂಫ್ ಸೌದಿ ಅರೇಬಿಯಾ, ರಿಯಾಝ್ ಕುಂಪನಮಜಲ್, ಇಸ್ಮಾಯಿಲ್ ಮಜಪೆ ಸಮವಸ್ತ್ರ ಸಂಗ್ರಹಕ್ಕೆ ಸಹಕರಿಸಿದರು.

ಈ ಸಂದರ್ಬದಲ್ಲಿ ಪುದು ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಸುಜೀರ್, ರಾಯಲ್ ಕಿಂಗ್ಸ್ ಕ್ರಿಕೆಟರ್ಸ್‌ನ ಫಯಾಜ್, ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಉಪಸ್ಥಿತರಿದ್ದರು. ಮುಹಮ್ಮದ್ ಬಿ. ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News