ನೇತ್ರದಾನದ ಬಗ್ಗೆ ತಪ್ಪು ಕಲ್ಪನೆ ಹೋಗಲಾಡಿಸಬೇಕಾಗಿದೆ: ಹರೀಶ್ ಬಾಳಿಗ

Update: 2018-09-02 07:59 GMT

ಮಂಗಳೂರು, ಸೆ.2: ನೇತ್ರ ದಾನದ ಬಗ್ಗೆ ಸಮಾಜದ ಬಹುತೇಕ ಜನರಲ್ಲಿ ತಪ್ಪು ಕಲ್ಪನೆ ಇದೆ ಅದನ್ನು ಹೋಗಲಾಡಿಸಬೇಕಾಗಿದೆ ಎಂದು ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಹರೀಶ್ ಬಾಳಿಗ ತಿಳಿಸಿದ್ದಾರೆ.

ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ನೇತ್ರ ಚಿಕಿತ್ಸಾ ತಜ್ಞರನ್ನೊಳಗೊಂಡ ದ.ಕ ಜಿಲ್ಲಾ ನೇತ್ರ ತಜ್ಞರ ಸೊಸೈಟಿಯ ವತಿಯಿಂದ ನೇತ್ರದಾನ ಜಾಗೃತಿ ಪಾಕ್ಷಿಕ ಅಂಗವಾಗಿ ಇಂದು ನಗರದಲ್ಲಿ ಐದು ಕಿಲೋಮೀಟರ್ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಓಟದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ, ಮಾತನಾಡುತ್ತಿದ್ದರು.

ಕಣ್ಣನ್ನು ನಾವು ದಾನ ಮಾಡುವ ಅಗತ್ಯದ ಬಗ್ಗೆ ಸರಿಯಾದ ಮಾಹಿತಿ ನೀಡಿ ಅದರ ಮಹತ್ವನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿ ನೇತ್ರ ತಜ್ಞರ ಸಂಘದ ಮೂಲಕ ಸಂಚಾರಿ ತಂಡ ಡಿಜಿಟಲ್ ಪರದೆಯ ಮೂಲಕ ಜನರಿಗೆ ನೆರವು ನೀಡುತ್ತಿರುವುದು ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹರೀಸ್ ಬಾಳಿಗ ತಿಳಿಸಿದರು.

ನೇತ್ರಾದಾನದ ಬಗ್ಗೆ ಅರಿವು ಮುಡಿಸುವ ನಿಟ್ಟಿನಲ್ಲಿ ವಿಶೇಷ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಸಂಚಾರಿ ವಾಹನದ ಮೂಲಕ ವಿವಿಧ ಗ್ರಾಮಗಳಿಗೆ ತೆರಳಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ನೇತ್ರತಜ್ಞರ ಸಂಘದ ಅಧ್ಯಕ್ಷ ಡಾ.ಸುಧೀರ್ ಹೆಗ್ಡೆ ತಿಳಿಸಿದರು.

ಈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾಗಿ ಎಂಆರ್‌ಪಿಎಲ್, ರೋಟರಿ ಇಂಟರ್ ನ್ಯಾಶನಲ್, ರೌಂಡ್ ಟೇಬಲ್, ಸಮ್‌ವಿತ್ತಿ ಕ್ಯಾಪಿಟಲ್, ಭರತ್ ಮೋಟಾರ್ಸ್‌, ಆಭರಣ ಜ್ಯುವೆಲ್ಲರ್ಸ್‌, ಮರಿಯಾನ ಬಿಲ್ಡರ್ಸ್‌ ಮತ್ತು ಜ್ಯೂಯಿಸ್ ಜಿಮ್ ಹಾಗೂ ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳ ಸಹಯೋಗದೊಂದಿಗೆ ನೇತ್ರಾದಾನ ಆಚರಣೆ ನಡೆಯಲಿದೆ.

ಜಾಗೃತಿ ಓಟ ಮತ್ತು ಪ್ರಶಸ್ತಿ ವಿತರಣೆ

ನಗರದ ಮನಪಾ ಕಚೇರಿಯ ಬಳಿಯಿಂದ ನೆಹರು ಮೈದಾನದ ವರೆಗೆ 5 ಕಿಮೀ ಜಾಗೃತಿ ಓಟ ಕಾರ್ಯಕ್ರಮ ನೇತ್ರಾದಾನ ಜಾಗೃತಿ ಓಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದವರನ್ನು ಅಭಿನಂದಿಸಿದರು.

ಪುರುಷರ ವಿಭಾಗದಲ್ಲಿ ಸೌರಭ್ ಪಾಟೀಲ್ ಪ್ರಥಮ, ಗೌರವ್ ರಾಮ್‌ವತಿ ದ್ವಿತೀಯ ಹಾಗೂ ಚೇತನ್ ಆರ್ ತೃತೀಯ ಬಹುಮಾನ ಪಡೆದರು.

ಮಹಿಳಾ ವಿಭಾಗದಲ್ಲಿ ಡಾ. ಸಹನಾ ಆಚಾರ್ಯ ಪ್ರಥಮ, ಡಾ. ಅನುಪಮ ರಾವ್ ದ್ವಿತೀಯ, ಡಾ. ಪಾರೂಲ್ ಪಾಟೇಲ್ ತೃತೀಯ ಬಹುಮಾನ ಪಡೆದರು.

ದಕ್ಷಿಣ ಕನ್ನಡ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ.ಸುಧೀರ್ ಹೆಗ್ಡೆ, ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಹರೀಶ್ ಬಾಳಿಗ, ಕರ್ನಾಟಕ ನೇತ್ರತಜ್ಞರ ಸೊಸೈಟಿಯ ಅಧ್ಯಕ್ಷ ಡಾ.ಸಾಯಿ ಗಿರಿಧರ್ ಮೊದಲಾದವರು ಭಾಗವಹಿಸಿದ್ದರು. ಡಾ.ಅಜಯ್ ಕುಡ್ವ ಸ್ವಾಗತಿಸಿ, ಡಾ. ವಿಕ್ರಂಪೈ ವಂದಿಸಿದರು. ಆಕಾಂಕ್ಷ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News