ನಿಮಗೆ ಗೊತ್ತಿರಲಿ, ಎದೆನೋವು ಎಂದಾಕ್ಷಣ ಅದು ಹೃದಯ ಸಮಸ್ಯೆಯೇ ಆಗಿರಬೇಕಿಲ್ಲ

Update: 2018-09-02 11:44 GMT

ಎದೆನೋವು ಕಾಣಿಸಿಕೊಂಡಾಕ್ಷಣ ಜನಸಾಮಾನ್ಯರು ಕಂಗೆಡುತ್ತಾರೆ. ಹೃದಯದ ಸಮಸ್ಯೆಯೊಂದೇ ಎದೆನೋವಿಗೆ ಕಾರಣವಲ್ಲ. ಎದೆನೋವಿಗೆ ಅಜೀರ್ಣದಂತಹ ಸಾಮಾನ್ಯ ಸಮಸ್ಯೆಯಿಂದ ಹಿಡಿದು ಹೃದಯಾಘಾತದವರೆಗೆ ಗಂಭೀರ ಕಾರಣಗಳಿವೆ. ವ್ಯಕ್ತಿ ಮೊದಲ ಬಾರಿ ಎದೆನೋವು ಅನುಭವಿಸಿದಾಗ ಅದಕ್ಕೆ ಕಾರಣವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಕೆಲವು ನಿಮಿಷಗಳವರೆಗೆ ಎದೆನೋವು ಮುಂದುವರಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಹೃದಯ, ಶ್ವಾಸಕೋಶಗಳು, ಜಠರಗರುಳು, ಮೂಳೆ ಅಥವಾ ಸ್ನಾಯು ಸಂಬಂಧಿತ ಸಮಸ್ಯೆಗಳು ಮತ್ತು ಇತರ ಕಾರಣಗಳಿಂದ ಎದೆನೋವು ಉಂಟಾಗುತ್ತದೆ.

ಹೃದಯ ಸಂಬಂಧಿತ ಕಾರಣಗಳು: ಪರಿಧಮನಿ ಕಾಯಿಲೆ, ಹೃದಯಾಘಾತ, ಪರಿಧಮನಿ ಛೇದನ,ಹೃದಯದ ಸ್ನಾಯುಗಳ ಉರಿಯೂತ,ಹೃದಯದ ಸ್ನಾಯುಗಳ ಪೆಡಸಾಗುವಿಕೆ,ಕಿರೀಟ ಕವಾಟ ಜಾರುವಿಕೆ

ಶ್ವಾಸಕೋಶ ಸಂಬಂಧಿತ ಕಾರಣಗಳು: ಶ್ವಾಸನಾಳಗಳ ಒಳಪೊರೆಯ ಉರಿಯೂತ,ನ್ಯುಮೋನಿಯಾ,ರಕ್ತ ಹೆಪ್ಪುಗಟ್ಟುವಿಕೆ,ಶ್ವಾಸಕೋಶ ವ್ಯಾಧಿ, ಶ್ವಾಸನಾಳಗಳ ಸಂಕುಚನ ಇತ್ಯಾದಿ.

ಜಠರಗರುಳು: ಅನ್ನನಾಳ ಸಂಬಂಧಿತ ಸಮಸ್ಯೆಗಳು,ಎದೆಯುರಿ ಅಥವಾ ಆ್ಯಸಿಡಿಟಿ,ಮೇದೋಜ್ಜೀರಕ ಗ್ರಂಥಿ ಅಥವಾ ಪಿತ್ತಕೋಶದ ಉರಿಯೂತ, ಪಿತ್ತಗಲ್ಲುಗಳು.

ಮೂಳೆ ಅಥವಾ ಸ್ನಾಯು ಸಂಬಂಧಿತ ಕಾರಣಗಳು: ಕುಗ್ಗುವಿಕೆಯಿಂದ ಮೂಳೆಮುರಿತ,ಪಕ್ಕೆಲಬುಗಳಿಗೆ ಗಾಯ ಅಥವಾ ಮುರಿತ, ದೀರ್ಘಕಾಲೀನ ಪರಿಶ್ರಮದಿಂದ ಸ್ನಾಯುಸಮಸ್ಯೆ

ಇತರ ಕಾರಣಗಳು: ಆತಂಕ, ನೋವಿನಿಂದ ಕೂಡಿದ ದದ್ದುಗಳು, ಭಾವನಾತ್ಮಕ ಒತ್ತಡ, ಹೃದಯದ ರಕ್ತನಾಳಗಳಲ್ಲಿ ತಡೆ, ಪಕ್ಕೆಲವನ್ನು ಎದೆಯ ಮೂಳೆಯೊಂದಿಗೆ ಜೋಡಿಸುವ ಮೃದ್ವಸ್ಥಿಯಲ್ಲಿ ಉರಿಯೂತ, ಶ್ವಾಸಕೋಶದ ರಕ್ತನಾಳಗಳಲ್ಲಿ ಅಡಚಣೆ ಇತ್ಯಾದಿ.

►ಎದೆನೋವಿಗೆ ಪ್ರಥಮ ಚಿಕಿತ್ಸೆ

ಹೃದಯಾಘಾತ: ಹೃದಯಾಘಾತವಾದಾಗ ಉಸಿರಾಟದ ವೇಳೆ ನೋವು, ದವಡೆ,ತೋಳು ಅಥವಾ ಬೆನ್ನಿನಲ್ಲಿ ನೋವು,ಎದೆಯಲ್ಲಿ ಬಿಗಿತ ಮತ್ತು ಒತ್ತಡ,ತಲೆಸುತ್ತುವಿಕೆ,ದಣಿವು,ಹೊಟ್ಟೆನೋವು,ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತವೆ. ಹೃದಯಾಘಾತದ ಸಂದರ್ಭದಲ್ಲಿ ಸ್ಥಳದಲ್ಲಿಯೇ ವೈದ್ಯಕೀಯ ನೆರವು ದೊರೆಯುವಂತೆ ನೋಡಿಕೊಳ್ಳಬೇಕು,ಅದು ಸಾಧ್ಯವಿಲ್ಲದಿದ್ದರೆ ಸುಸಜ್ಜಿತ ಆ್ಯಂಬುಲನ್ಸ್‌ನಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಬೇಕು.

ಆ್ಯಂಜಿನಾ: ಎದೆನೋವಿನೊಂದಿಗೆ ದವಡೆ,ತೋಳು,ಬೆನ್ನು ಅಥವಾ ಕುತ್ತಿಗೆಯಲ್ಲಿ ನೋವು,ದಣಿವು,ವಾಕರಿಕೆ,ಬೆವರುವಿಕೆ,ತಲೆಸುತ್ತುವಿಕೆ ಮತ್ತು ಉಸಿರಾಟದ ತೊಂದರೆ ಇವು ಆ್ಯಂಜಿನಾದ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ನೈಟ್ರೋಗ್ಲಿಸರಿನ್ ಮಾತ್ರೆಯನ್ನು ರೋಗಿಯ ನಾಲಿಗೆಯ ಬುಡದಲ್ಲಿರಿಸಬೇಕು ಅಥವಾ ನೈಟ್ರೋಗ್ಲಿಸರಿನ್ ಸ್ಪ್ರೇ ಮಾಡಬೇಕು.ಐದು ನಿಮಿಷಗಳಲ್ಲಿ ರೋಗಿಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದಿದ್ದರೆ ತಕ್ಷಣವೇ ಆಸ್ಪತ್ರೆಗೆ ಸಾಗಿಸುವುದು ಅಗತ್ಯವಾಗುತ್ತದೆ.

ಆಮ್ಲದ ಹಿಮ್ಮುಖ ಹರಿವು: ವ್ಯಕ್ತಿಯಲ್ಲಿ ಉಸಿರಾಟದ ತೊಂದರೆ,ವಾಕರಿಕೆ,ದವಡೆ ಅಥವಾ ತೋಳಿನಲ್ಲಿ ನೋವು ಇತ್ಯಾದಿ ಲಕ್ಷಣಗಳಿದ್ದರೆ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ. ಏಕೆಂದರೆ ಹಲವು ಬಾರಿ ಆ್ಯಸಿಡಿಟಿಯಿಂದ ಕಾಣಿಸಿಕೊಳ್ಳುವ ಎದೆನೋವನ್ನು ಹೃದಯಾಘಾತವೆಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗೆ ಆ್ಯಂಟಾಸಿಡ್ ನೀಡಿದರೆ ಸುಧಾರಣೆ ಕಂಡು ಬರುತ್ತದೆ. ವೈದ್ಯರು ತಪಾಸಣೆಯ ಬಳಿಕ ಅದು ಆ್ಯಸಿಡಿಟಿಯಿಂದ ಅಥವಾ ಹೃದಯಾಘಾತದಿಂದ ಉಂಟಾದ ನೋವೇ ಎನ್ನುವುದನ್ನು ನಿರ್ಧರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News