ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ರಂಗವಲ್ಲಿ
Update: 2018-09-02 18:15 IST
ಉಡುಪಿ, ಸೆ. 2: ಬ್ರಹ್ಮಾವರದ ಕುರುಡುಂಜೆ ಗೋಪಾಲಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ರಂಗವಲ್ಲಿ ರಚಿಸಿ ಪೂಜಿಸಲಾಯಿತು.
ಕಂಸನು ಶ್ರೀಕೃಷ್ಣನನ್ನು ಸೋಲಿಸಲು ಕತೆಯ ರೂಪದಲ್ಲಿ ಕಳುಹಿಸಿದ ಧೇನು ಕಾಸುರನನ್ನು ಶ್ರೀಕೃಷ್ಣ ಸಂಹರಿಸುವ ಮಾರ್ಮಿಕ ದೃಶ್ಯವನ್ನು ಕಲಾವಿದ ಉಪಾ ಧ್ಯಾಯ ಮೂಡುಬೆಳ್ಳೆ ರಚಿಸಿದ್ದಾರೆ.
ಕ್ಷೇತ್ರದ ಅರ್ಚಕ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಭಕ್ತವೃಂದ ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಘ್ಯಪ್ರದಾನ ಮಾಡಿದರು.