ಔಷಧ ತಜ್ಞರಿಗೆ ಮುಂದುವರಿದ ಕಲಿಕಾ ಕಾರ್ಯಾಗಾರ
Update: 2018-09-02 20:55 IST
ಉಡುಪಿ, ಸೆ. 2: ಉಡುಪಿಯ ಔಷಧ ನಿಯಂತ್ರಣ ಇಲಾಖೆ, ಮಣಿಪಾಲ ಕಾಲೇಜ್ ಆಫ್ ಫಾರ್ಮಸಿ ಸೈನ್ಸ್ ಹಾಗೂ ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಸಂಯುಕ್ತ ಆಶ್ರಯದಲ್ಲಿ ನೊಂದಾಯಿತ ಔಷಧ ತಜ್ಞರಿಗೆ ಮುಂದುವರಿದ ಕಲಿಕಾ ಕಾರ್ಯಾಗಾರವನ್ನು ಶನಿವಾರ ಮಣಿಪಾಲ ಕಾಲೇಜ್ ಆಫ್ ಫಾರ್ಮಸಿ ಸೈನ್ಸ್‌ನ ಗುಂಡೂರಾವ್ ಸಭಾಂಗಣದಲ್ಲಿ ಆಯೋಜಿಸ ಲಾಗಿತ್ತು.
ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ್ ರಾವ್ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ತಾಲೂಕಿನ 150 ನೊಂದಾಯಿತ ಔಷಧ ತಜ್ಞರು ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದು ಕೊಂಡರು.
ಉಡುಪಿ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಔಷಧ ನಿಯಂತ್ರ ಣಾಧಿಕಾರಿ ಕೆ.ವಿ.ನಾಗರಾಜ, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಮಹಾದೇವ ರಾವ್ ಉಪಸ್ಥಿತರಿದ್ದರು.