×
Ad

ಉಡುಪಿ: ಬೆಳ ಸಮೀಕ್ಷೆ ಮಾಡಲು ಸ್ಥಳೀಯರಿಗೆ ಸಂಭಾವನೆ

Update: 2018-09-02 20:59 IST

ಉಡುಪಿ, ಸೆ.2: ಪ್ರತಿಯೊಂದು ಜಮೀನಿನ ಪಹಣಿಯಲ್ಲಿ ರೈತರು ಬೆಳೆದ ಬೆಳೆಯ ಮಾಹಿತಿ ಇಲ್ಲದಿರುವುದರಿಂದ ಸರಕಾರದ ವಿವಿಧ ಯೋಜನೆಗಳಡಿ ರೈತರಿಗೆ ದೊರಕುವ ಪ್ರಯೋಜನಗಳನ್ನು ಪಡೆಯಲು ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ರೈತರು ತಾವು ಬೆಳೆದಿರುವ ಬೆಳೆಯ ಮಾಹಿತಿಯನ್ನು ಮೊಬೈಲ್ ತಂತ್ರಾಂಶ ಬಳಸಿ, ಹಿಡುವಳಿವಾರು ಸಮೀಕ್ಷೆ ನಡೆಸಿ ದಾಖಲಿಸಲು ಸರಕಾರ ನಿರ್ದೇಶನ ನೀಡಿದೆ.

ಆದುದರಿಂದ 2018ರ ಮುಂಗಾರು ಬೆಳೆಯ ಸಮೀಕ್ಷೆ ಕಾರ್ಯಕ್ಕಾಗಿ ಮೊಬೈಲ್ ತಂತ್ರಾಂಶದ ಬಗ್ಗೆ ಮಾಹಿತಿ ಇರುವ ಅಂಡ್ರಾಯ್ಡಾ ಮೊಬೈಲ್ ಫೋನ್ ಹೊಂದಿರುವ ಸ್ಥಳೀಯ ಆಸಕ್ತ ಅಭ್ಯರ್ಥಿಗಳು ಸೆ.4ರೊಳಗೆ ತಮ್ಮ ಗ್ರಾಮದ ಗ್ರಾಮ ಕರಣಿಕರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಈ ಕಾರ್ಯಕ್ಕಾಗಿ ಸರಕಾರ ನಿಗಧಿಪಡಿಸಿರುವ ಸಂಭಾವನೆಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News