×
Ad

ಮಂಗಳೂರು: ಕಾರು ಶೋರೂಂನಲ್ಲಿ ಅಗ್ನಿ ಆಕಸ್ಮಿಕ

Update: 2018-09-02 21:40 IST

ಮಂಗಳೂರು, ಸೆ. 2: ನಗರದ ಮೇರಿಹಿಲ್‌ನಲ್ಲಿರುವ ಶ್ರೀನಿಧಿ ಆಟೋಮೊಬೈಲ್ಸ್ ಕಾರು ಶೋರೂಂನಲ್ಲಿ ರವಿವಾರ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.

ಶೋರೂಂನಲ್ಲಿನ ಇಲೆಕ್ಟ್ರಿಕ್ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮೀಟರ್ ಬೋರ್ಡ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಾಂಪ್ಲೆಕ್ಸ್ ಪೂರ್ಣ ಹೊಗೆಯಿಂದ ಆವರಿಸಿತ್ತು.

ಶೋರೂಂನಲ್ಲಿ ಬೆಲೆ ಬಾಳುವ ಕಾರುಗಳಿದ್ದು, ಯಾವುದೇ ಕಾರಿಗೆ ಹಾನಿಯಾಗಿಲ್ಲ. ಮೀಟರ್ ಬೋರ್ಡ್, ವೈರಿಂಗ್ ಹಾಗೂ ಇಲೆಕ್ಟ್ರಿಕ್ ಬೋರ್ಡ್‌ಗಳ ಹಾನಿಯಿಂದಾಗಿ ಸುಮಾರು 10-15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಶೋರೂಂ ಮಾಲಕರು ದೂರಿರುವುದಾಗಿ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳ ಅಧಿಕಾರಿ ಸುನೀಲ್‌ಕುಮಾರ್, ಸಹಾಯಕ ಅಧಿಕಾರಿ ಎಂ.ಭೀಮಯ್ಯ, ಹೆಡ್ ಕಾನ್‌ಸ್ಟೇಬಲ್ ಹರಿಪ್ರಕಾಶ್ ಶೆಟ್ಟಿ, ಪ್ರದೀಪ್ ಗಂಟಿ, ಪ್ರಭಾಕರ್, ಚಾಲಕ ಲಕ್ಷ್ಮಣ ನಾಯಕ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News