ಕೇರಳಕ್ಕೆ ಹೆಚ್ಚುವರಿ ಅಕ್ಕಿ ಉಚಿತವಾಗಿ ನೀಡಿ: ಪಿಣರಾಯಿ ವಿಜಯನ್ ಮನವಿ

Update: 2018-09-02 16:40 GMT

ತಿರುವನಂತಪುರ, ಸೆ. 2: ನೆರೆ ಪೀಡಿತ ಪ್ರದೇಶಗಳಿಗೆ ಪೂರೈಸಲು ನೀಡಲಾದ ಹೆಚ್ಚುವರಿ 98,540 ಟನ್ ಅಕ್ಕಿಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸಿದ್ದಾರೆ.

ಹೆಚ್ಚುವರಿ ಅಕ್ಕಿಗೆ ಹಣ ಪಡೆದುಕೊಳ್ಳಬಾರದು. ಉಚಿತವಾಗಿ ನೀಡಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ನೆರೆ ಪರಿಸ್ಥಿತಿಯ ತೀವ್ರತೆ ಗಣನೆಗೆ ತೆಗೆದುಕೊಂಡು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಅಕ್ಕಿ ವೌಲ್ಯವನ್ನು ಕಳೆಯಬಾರದು ಎಂದು ವಿಜಯನ್ ಹೇಳಿದ್ದಾರೆ.

ನೆರೆ ಪೀಡಿತ ಪ್ರದೇಶಗಳಲ್ಲಿ ವಿತರಿಸಲು ಕೇರಳ ಸರಕಾರ ಕೇಂದ್ರ ಸರಕಾರದಿಂದ ಉಚಿತವಾಗಿ 1.18 ಲಕ್ಷ ಟನ್ ಅಕ್ಕಿ ನೀಡುವಂತೆ ವಿನಂತಿಸಿತ್ತು. ಮನವಿಯಂತೆ ಆಹಾರ ಸಚಿವಾಲಯ ರಾಜ್ಯಕ್ಕೆ 89.540 ಟನ್‌ಗಳಷ್ಟು ಹೆಚ್ಚುವರಿ ಅಕ್ಕಿ ಪೂರೈಸಿತ್ತು. ಆದಾಗ್ಯೂ, ಇದಕ್ಕೆ ಹಣ ಪಾತಿಸದಂತೆ ಕೇಂದ್ರ ಸರಕಾರ ತಿಳಿಸಿತ್ತು. ಆದರೆ, ಈ ಹಣವನ್ನು ಎನ್‌ಡಿಆರ್‌ಫ್ ಅಥವಾ ಆಹಾರ ಸುರಕ್ಷಾ ಕಾನೂನಿನಂತೆ ಇತರ ಕಾರ್ಯಕ್ರಮಗಳಿಂದ ಕಡಿತಗೊಳಿಸುವುದಾಗಿ ಗ್ರಾಹಕ ವ್ಯವಹಾರ, ಆಹಾರ, ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯ ಕೇರಳ ಸರಕಾರಕ್ಕೆ ಮಾಹಿತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News