ಸರ್ವೋಚ್ಚ ನ್ಯಾಯಾಲಯ ಪಿಕ್ನಿಕ್ ಸ್ಥಳವಲ್ಲ: ಐಟಿ ಇಲಾಖೆ ವಿರುದ್ಧ ಸುಪ್ರೀಂ ಗರಂ

Update: 2018-09-02 16:53 GMT

ಹೊಸದಿಲ್ಲಿ, ಸೆ. 2: ಮನವಿಗಳು ಬಾಕಿ ಇರುವ ಕುರಿತು ‘ಹಾದಿ ತಪ್ಪಿಸುವ ಹೇಳಿಕೆ’ ನೀಡುತ್ತಿರುವ ಆದಾಯ ತೆರಿಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿರುವ ಸರ್ವೋಚ್ಚ ನ್ಯಾಯಾಲಯ, ಸುಪ್ರೀಂ ಕೋರ್ಟ್ ಪಿಕ್ನಿಕ್ ಸ್ಥಳ ಅಲ್ಲ ಎಂದಿದೆ.

ಆದಾಯ ತೆರಿಗೆ ಇಲಾಖೆಗೆ 10 ಲಕ್ಷ ದಂಡ ವಿಧಿಸಿರುವ ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಅವರನ್ನು ಒಳಗೊಂಡ ಪೀಠ, ಕೇಂದ್ರ ಸರಕಾರ ಆದಾಯ ತೆರಿಗೆ ಆಯುಕ್ತರ ಮೂಲಕ ಈ ವಿಷಯವನ್ನು ಗಂಭೀರವಾಗಿ ಪರಿಗಣಸದೇ ಇರುವುದು ಆಘಾತ ಉಂಟು ಮಾಡಿದೆ ಎಂದಿದ್ದಾರೆ. 596 ದಿನ ವಿಳಂಬ ಹಾಗೂ ವಿಳಂಬಕ್ಕೆ ಸರಿಯಾದ ಹಾಗೂ ಒಪ್ಪಿಕೊಳ್ಳಲಾಗದ ವಿವರಣೆ ನೀಡಿದ ಬಳಿಕ ಆದಾಯ ತೆರಿಗೆ ಇಲಾಖೆ ಮನವಿ ಸಲ್ಲಿಸಿರುವುದನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹಾಗೂ ದೀಪಕ್ ಗುಪ್ತಾ ಅವರನ್ನು ಕೂಡಾ ಒಳಗೊಂಡ ಪೀಠ ಉಲ್ಲೇಖಿಸಿದೆ.

“ದಯವಿಟ್ಟು ಇದನ್ನು ಮಾಡಬೇಡಿ. ಸುಪ್ರೀಂ ಕೋರ್ಟ್ ಪಿಕ್ನಿಕ್ ಸ್ಥಳವಲ್ಲ. ಭಾರತದ ಸುಪ್ರೀಂ ಕೋರ್ಟ್ ಅನ್ನು ಪರಿಗಣಿಸುವ ರೀತಿಯೇ ಇದು ?” ಎಂದು ಆದಾಯ ತೆರಿಗೆ ಇಲಾಖೆ ಪರವಾಗಿ ಹಾಜರಾಗಿದ್ದ ವಕೀಲರಲ್ಲಿ ಪೀಠ ಪ್ರಶ್ನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News