​ಆಚಾರ್ಯರ ಕನಸಿನ ನಗರಸಭೆ ನಮ್ಮ ಗುರಿ: ರಘುಪತಿ ಭಟ್

Update: 2018-09-03 13:30 GMT

ಉಡುಪಿ, ಸೆ.3: ಬಿಜೆಪಿಗೆ ಉಡುಪಿ ನಗರಸಭೆಯಲ್ಲಿ ಗೆಲುವು ತಂದು ಕೊಟ್ಟ ಮತದಾರರಿಗೆ ಕೃತಜ್ಞತೆಗಳು. ಕಾರ್ಯಕರ್ತರು ಹಗಲಿರುಳು ದುಡಿದ ಪರಿ ಣಾಮ ಈ ಜಯ ಸಾಧಿಸಲು ಸಾಧ್ಯವಾಗಿದೆ. ಮುಂದೆ ಉಡುಪಿ ನಗರಸಭೆ ಯನ್ನು ಡಾ.ವಿ.ಎಸ್.ಆಚಾರ್ಯರ ಕನಸಿನ ನಗರಸಭೆಯನ್ನಾಗಿ ಮಾಡಲಾಗು ವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಕುಂಜಿಬೆಟ್ಟುವಿನ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದ ಅವರು ಮಾಧ್ಯಮ ದವರೊಂದಿಗೆ ಮಾತನಾಡಿ, ಇದು ಬಿಜೆಪಿ ಜಯದ 50ನೆ ವರ್ಷ. 1968ರಲ್ಲಿ ಡಾ.ವಿ.ಎಸ್. ಆಚಾರ್ಯರ ನೇತೃತ್ವದಲ್ಲಿ ಹಳೆಯ ನಗರಸಭೆಯಲ್ಲಿ 19ರಲ್ಲಿ 13 ಸ್ಥಾನವನ್ನು ಬಿಜೆಪಿ ಗೆದ್ದಿತ್ತು. ಆ ಮೂಲಕ ಇಡೀ ಭಾರತದಲ್ಲಿ ಜನಸಂಘ ಪ್ರಥಮವಾಗಿ ಅಧಿಕಾರವನ್ನು ಪಡೆದುಕೊಂಡಿತ್ತು. ಇದೀಗ 50ವರ್ಷಗಳ ನಂತರ 35ರಲ್ಲಿ 31 ದಾಖಲೆಯ ಸ್ಥಾನಗಳಿಸಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭರ್ಜರಿ ಬುಮತ ಪಡೆದುಕೊಂಡಿದೆ ಎಂದರು.

ರಾಜ್ಯ ಸರಕಾರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಯಾವ ಮೀಸಲಾತಿ ಘೋಷಿಸಿದರೂ ನಮ್ಮಲ್ಲಿ ಅದಕ್ಕೆ ಬೇಕಾದ ಸದಸ್ಯರಿದ್ದಾರೆ. ಅಧಿಕಾರವನ್ನು ನಮ್ಮಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಪ್ರಮೋದ್ ಮಧ್ವರಾಜ್ ಮನೆ ಇರುವ ಕೊಡವೂರು ಗ್ರಾಮದ ಆರಕ್ಕೆ ಆರು ವಾರ್ಡ್‌ಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದೆ. ಇದು ಯಾವುದೇ ಅಲೆ ಅಥವಾ ಅಪಪ್ರಚಾರದಿಂದ ಸಾಧಿಸಿದ ಗೆಲುವು ಅಲ್ಲ. ಕಾರ್ಯಕರ್ತರ ಪರಿಶ್ರಮಕ್ಕೆ ದೊರೆತ ಗೆಲುವು ಆಗಿದೆ. ವಾರ್ಡ್ ಮೀಸಲಾತಿ ಬದಲಾಯಿಸಿದರೂ ಅದನ್ನು ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಪಕ್ಷಕ್ಕೆ ಬಹುಮತ ಗಳಿಸಿ ಕೊಟ್ಟಿದ್ದಾರೆ. ಮೀಸಲಾತಿಯಲ್ಲಿ ಕಾಂಗ್ರೆಸ್‌ನ ಆಟ ನಡೆದಿಲ್ಲ ಎಂದು ಅವರು ಟೀಕಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News