ಕಣಚೂರು ವಿದ್ಯಾ ಸಂಸ್ಥೆಯಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ

Update: 2018-09-03 14:08 GMT

ಕೊಣಾಜೆ, ಸೆ. 3: ಕಣಚೂರು ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ  2018-19ನೇ ಸಾಲಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಣಚೂರು ಇಸ್ಲಾಮಿಕ್ ಎಜ್ಯಕೇಶನ್ ಟ್ರಸ್ಟ್  ಅಧ್ಯಕ್ಷ ಹಾಜಿ ಯು ಕೆ ಮೋನು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಣಚೂರು ಮೆಡಿಕಲ್ ಆಸ್ಪತ್ರೆಯು ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಉಪಯೋಗವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿವೆ. ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಸಹಕರಿಸಿ, ಸಮಾಜದ ಅಭಿವೃದ್ಧಿಗಾಗಿ ಪ್ರಯತ್ನಿಸೋಣ ಎಂದರು.

ಕಾರ್ಯಕ್ರಮದಲ್ಲಿ ಝೊಹರ ಮೋನು, ಆಡಳಿತ ನಿರ್ದೇಶಕರಾದ ಅಬ್ದುಲ್ ರೆಹಮಾನ್ ಮತ್ತು ಸಹದಾ ರೆಹಮಾನ್, ಕಣಚೂರು ಇಸ್ಲಾಮಿಕ್ ಎಜ್ಯಕೇಶನ್ ಟ್ರಸ್ಟಿನ ಟ್ರಸ್ಟಿಗಳಾದಂತಹ ಉಮಾಯ ಬಾನು, ಫರಿದಾ ಹಾಗೂ ತಸ್ಲಿಮ್ ಆರೀಫ್ ನಝೀರ್  ಉಪಸ್ಥಿತರಿದ್ದರು.

ಡೀನ್ ಡಾ. ಎಚ್. ಎಸ್. ವಿರುಪಾಕ್ಷ, ಸಹಾಯಕ ಡೀನ್ ಡಾ. ಶ್ರಿಶಾ ಖಂಡಿಗೆ, ವೈದ್ಯಕೀಯ ಆದೀಕ್ಷಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ. ಸಮಾಜ ಸೇವಕರು ಮಾದವ ಭಗಂಬಿಲ , ಫಿಸಿಯೋಥೇರಪಿ ಪ್ರಾಶುಂಪಾಲ ಡಾ. ಸುಹೆಲ್, ನರ್ಸಿಂಗ್ ಕಾಲೇಜಿನ ಪ್ರೋಫೆಸರ್ ರೆನಿಡಾ ಶಾಂತಿ ಲೋಬೋ, ಪ್ಯಾರಾಮೆಡಿಕಲ್ ಸೈನ್ಸ್‍ಸ್‍ನ ಪ್ರಾಶುಂಪಾಲ ಡಾ.ವಿವಿಯನ್ ಡಿ’ಸೋಜ ಹಾಗೂ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ಸ್‍ನ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.

ಡೀನ್ ಡಾ.ಎಚ್. ಎಸ್. ವಿರುಪಾಕ್ಷ ಅವರು ಸಂಸ್ಥೆಯ ಮತ್ತು ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ನಿಯಮಗಳು ಮತ್ತು ನಿಬಂದನೆಗಳನ್ನು ವಿವರಿಸಿದರು, ಅನೋಟೋಮಿ ವಿಭಾಗದ ಪ್ರೋಫೆಸರ್ ಡಾ. ವರ್ಷ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಡಾ.ಭಾಗ್ಯ ಜೋತಿ ವಂದಿಸಿದರು. ಡಾ.ಅನೇಟ್ ಅವರು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News