ಬಂಟ್ವಾಳದಲ್ಲಿ ಅತಂತ್ರ ಫಲಿತಾಂಶ

Update: 2018-09-03 14:51 GMT

ಬಂಟ್ವಾಳ, ಸೆ.3: ಶುಕ್ರವಾರ ನಡೆದ ಬಂಟ್ವಾಳ ಪುರಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಬಂಟ್ವಾಳದಲ್ಲಿ ಅತಂತ್ರ ಫಲಿತಾಂಶ ಕಂಡುಬಂದಿದೆ.

ಸೋಮವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿ 10ರವರೆಗೆ ಬಿ.ಸಿ.ರೋಡ್‍ನ ಮಿನಿ ವಿಧಾನಸೌಧದಲ್ಲಿ ಮತ ಎಣಿಕಾ ಪ್ರಕ್ರಿಯೆ ನಡೆಯಿತು.
ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 11 ಹಾಗೂ ಎಸ್ಡಿಪಿಐ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು 14 ಸ್ಥಾನಗಳ ಆವಶ್ಯವಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 

ಕಳೆದ ಬಾರಿ ಪುರಸಭೆಯ ಅಧಿಕಾರದಲ್ಲಿದ್ದ ಕಾಂಗ್ರೆಸ್, 13ರಲ್ಲಿ 1 ಸ್ಥಾನ ಕಳೆದುಕೊಂಡರೆ, 5 ಸದಸ್ಯರಿದ್ದ ಬಿಜೆಪಿ 6 ಹಾಗೂ ಮೂರು ಸದಸ್ಯರಿದ್ದ ಎಸ್‍ಡಿಪಿಐ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದ್ದು, ಜೆಡಿಎಸ್ ಸಂಪೂರ್ಣವಾಗಿ ನೆಲಕಚ್ಚಿದೆ.
ದಾಖಲೆಯ ಗೆಲುವು:

ಕಳೆದ ಸಾಲಿನ ಸದಸ್ಯರಾದ ಎ. ಗೋವಿಂದ ಪ್ರಭು (ಬಿಜೆಪಿ), ಕಳೆದ ಅವಧಿಯ ಕಾಂಗ್ರೆಸ್ ಆಡಳಿತದ ಅಧ್ಯಕ್ಷರಾಗಿದ್ದ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷರಾಗಿದ್ದ ಮುಹಮ್ಮದ್ ನಂದರಬೆಟ್ಟು, ಗಂಗಾಧರ, ಬಿ.ವಾಸು ಪೂಜಾರಿ, ಮುಹಮ್ಮದ್ ಶರೀಫ್, ಜೆಸಿಂತಾ (ಕಾಂಗ್ರೆಸ್), ಮುನೀಶ್ ಅಲಿ (ಎಸ್‍ಡಿಪಿಐ) ಗೆದ್ದರೆ, ಇವರಲ್ಲಿ ಎ.ಗೋವಿಂದ ಪ್ರಭು ಸತತ ಏಳನೇ ಜಯ ಗಳಿಸಿದ್ದು ದಾಖಲೆ.

ಸೋತ ಪ್ರಮುಖರು:
ಕಳೆದ ಅವಧಿಯ ಸದಸ್ಯೆಯಾಗಿದ್ದ ಬಿಜೆಪಿಯ ಕೆ.ಸುಗುಣ ಕಿಣಿ, ಹಿಂದಿನ ಎರಡು ಬಾರಿ ಅಧ್ಯಕ್ಷರಾಗಿದ್ದ ಬಿಜೆಪಿಯ ದಿನೇಶ್ ಭಂಡಾರಿ ಸೋತ ಪ್ರಮುಖರಲ್ಲಿ ಸೇರಿದ್ದಾರೆ. ಈ ಬಾರಿ 179 ನೋಟಾ ಮತಗಳು ಚಲಾವಣೆಯಾಗಿವೆ.

ಗರಿಷ್ಠ-ಕನಿಷ್ಠ ಮತಗಳು:
ವಾರ್ಡ್ 24ರಲ್ಲಿ ಕಾಂಗ್ರೆಸ್‍ನ ಸಿದ್ದೀಕ್ ಗುಡ್ಡೆಯಂಗಡಿ 407 ಮತಗಳ ಅಂತರದ ಗೆಲುವು ಸಾಧಿಸಿದ್ದು ಗರಿಷ್ಠವಾದರೆ, ನಂದರಬೆಟ್ಟು ವಾರ್ಡಿನಲ್ಲಿ ಮುಹಮ್ಮದ್ ನಂದರಬೆಟ್ಟು 4 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಡಿಮೆ ಅಂತರದ ಗೆಲುವು ಸಾಧಿಸಿದ್ದಾರೆ.

ವಾರ್ಡ್, ಅಭ್ಯರ್ಥಿ, ಮತಗಳು:
ವಾರ್ಡ್ 1 ಲೊರೆಟ್ಟೊಪದವು: ಒಟ್ಟು ಮತಗಳು: 1643, ಚಲಾಯಿತ ಮತಗಳು: 1131. ಬೂತ್ 1ರಲ್ಲಿ 846 ಮತಗಳಲ್ಲಿ 588 ಚಲಾಯಿತ, ಬೂತ್ 2ರಲ್ಲಿ 797 ಮತಗಳಲ್ಲಿ 543 ಚಲಾಯಿತ. ಈ ಪೈಕಿ ಬಿ.ವಾಸುಪೂಜಾರಿ (ಕಾಂಗ್ರೆಸ್) 426, ಚಂದ್ರಶೇಖರ ಪೂಜಾರಿ (ಬಿಜೆಪಿ) 397, ರಿಯಾಝ್ ಲೊರೆಟ್ಟೊಪದವು (ಎಸ್‍ಡಿಪಿಐ) 302, ನೋಟಾ 6. ಕಾಂಗ್ರೆಸ್‍ನ ಬಿ.ವಾಸು ಪೂಜಾರಿ ಅವರು 29 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 2 ಮಂಡಾಡಿ: ಒಟ್ಟು ಮತಗಳು 1282. ಚಲಾಯಿತ ಮತಗಳು: 989. ಗಂಗಾಧರ ಪೂಜಾರಿ ಮಂಡಾಡಿ (ಕಾಂಗ್ರೆಸ್) 563, ಬಿ.ದಿನೇಶ ಭಂಡಾರಿ (ಬಿಜೆಪಿ) 421, ನೋಟಾ 5 ಕಾಂಗ್ರೆಸ್‍ನ ಗಂಗಾಧರ ಮಂಡಾಡಿ 142 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ವಾರ್ಡ್ 3 ಮಣಿ: ಒಟ್ಟು ಮತಗಳು-1651. ಚಲಾಯಿತ ಮತಗಳು-1323. ಬೂತ್ 1ರಲ್ಲಿ 898ರಲ್ಲಿ 773, ಬೂತ್ 2ರಲ್ಲಿ 753ರಲ್ಲಿ 550 ಚಲಾಯಿತ. ಈ ಪೈಕಿ ಹೇಮಾವತಿ (ಕಾಂಗ್ರೆಸ್) 586, ಮೀನಾಕ್ಷೀ ಜೆಗೌಡ (ಬಿಜೆಪಿ) 722, ನೋಟಾ 15. ಬಿಜೆಪಿಯ ಮೀನಾಕ್ಷಿ ಜೆ. ಗೌಡ ಅವರು 136 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 4 ಕಾಲೇಜು ರಸ್ತೆ: ಒಟ್ಟು ಮತಗಳು-1014. ಚಲಾಯಿತ ಮತಗಳು-763. ಈ ಪೈಕಿ ಪ್ರತಿಮಾ ರವಿ ಕುಮಾರ್ (ಕಾಂಗ್ರೆಸ್), 327, ರೇಖಾ ರಮಾನಾಥ ಪೈ (ಬಿಜೆಪಿ) 431. ನೋಟಾ 5. ಇವರಲ್ಲಿ ಬಿಜೆಪಿಯ ರೇಖಾ ರಮಾನಾಥ ಪೈ ಅವರು 104 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 5  ಜಕ್ರಿಬೆಟ್ಟು: ಒಟ್ಟು ಮತಗಳು-1180. ಚಲಾಯಿತ ಮತಗಳು-897. ಈ ಪೈಕಿ ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್) 520, ವಿಶ್ವನಾಥ ಚಂಡ್ತಿಮಾರ್ (ಬಿಜೆಪಿ) 366. ನೋಟಾ 11. ಇವರಲ್ಲಿ ಕಾಂಗ್ರೆಸ್‍ನ ಜನಾರ್ದನ ಚಂಡ್ತಿಮಾರ್ 154 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 6 ಹೊಸ್ಮರ್: ಒಟ್ಟು ಮತಗಳು-1331. ಚಲಾಯಿತ ಮತಗಳು-951. ಈ ಪೈಕಿ ಜಯಂತಿ ಸೋಮಪ್ಪ ಪೂಜಾರಿ (ಕಾಂಗ್ರೆಸ್) 332, ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ) 606 ನೋಟಾ 13. ಇವರಲ್ಲಿ ಬಿಜೆಪಿಯ ದೇವಕಿ ಶಿವಪ್ಪ ಪೂಜಾರಿ 274 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 7 ಬಂಟ್ವಾಳ ಪೇಟೆ: ಒಟ್ಟು ಮತಗಳು-924. ಚಲಾಯಿತ ಮತಗಳು-592. ಈ ಪೈಕಿ ಧನವಂತಿ ಮಹಾಬಲ ಬಂಗೇರ (ಕಾಂಗ್ರೆಸ್) 120, ಶಶಿಕಲಾ ಪ್ರಭಾಕರ್ (ಬಿಜೆಪಿ), 465  ನೋಟಾ 7. ಇವರಲ್ಲಿ ಬಿಜೆಪಿಯ ಶಶಿಕಲಾ ಪ್ರಭಾಕರ್ 345 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 8 ಕೆಳಗಿನಪೇಟೆ: ಒಟ್ಟು ಮತಗಳು-1122, ಚಲಾಯಿತ ಮತಗಳು-882. ಮುಹಮ್ಮದ್ ಸಗೀರ್ ಬಿ.ಎಲ್ (ಕಾಂಗ್ರೆಸ್) 272, ಮುನೀಶ್ ಅಲಿ ಮಹಮ್ಮದ್ (ಎಸ್‍ಡಿಪಿಐ) 374, ಉಮರಬ್ಬ (ಬಿಜೆಪಿ) 16, ಹಾರೂನ್ ರಶೀದ್(ಜೆಡಿಎಸ್) 219, ನೋಟಾ 1. ಇವರಲ್ಲಿ ಎಸ್‍ಡಿಪಿಐನ ಮುನೀಶ್ ಅಲಿ ಮುಹಮ್ಮದ್ 53 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 9 ಭಂಡಾರಿಬೆಟ್ಟು: ಒಟ್ಟು ಮತಗಳು-1253. ಚಲಾಯಿತ ಮತಗಳು-948. ಜಗದೀಶ್ ಕುಂದರ್ (ಕಾಂಗ್ರೆಸ್) 409, ಹರಿಪ್ರಸಾದ್ (ಬಿಜೆಪಿ)  536, ನೋಟಾ 1. ಇವರಲ್ಲಿ ಬಿಜೆಪಿಯ ಹರಿಪ್ರಸಾದ್ 127 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 10 ಕಾಮಾಜೆ: ಒಟ್ಟು ಮತಗಳು 1303 ಚಲಾಯಿತ ಮತಗಳು 918 ವನಜಾಕ್ಷಿ ಬಿ. ಶೇಖರ (ಸಿಪಿಐ ? ಕಾಂಗ್ರೆಸ್ ಬೆಂಬಲಿತ) 312, ಶೋಭಾ ಹರಿಶ್ಚಂದ್ರ (ಬಿಜೆಪಿ) 599, ನೋಟಾ 7 ಬಿಜೆಪಿಯ ಶೋಭಾ ಹರಿಶ್ಚಂದ್ರ 287 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ವಾರ್ಡ್ 11 ಸಂಚಯಗಿರಿ: ಒಟ್ಟು ಮತಗಳು-1264. ಚಲಾಯಿತ ಮತಗಳು-759. ಸುಜಾತಾ ಎಸ್.ಅಮೀನ್ (ಕಾಂಗ್ರೆಸ್) 279, ಜಯಂತಿ ವಸಂತ ಕುಲಾಲ್ (ಬಿಜೆಪಿ) 474, ನೋಟಾ 6. ಇವರಲ್ಲಿ ಬಿಜೆಪಿಯ ಜಯಂತಿ ವಸಂತ ಕುಲಾಲ್ 195 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 12 ಅಜ್ಜಿಬೆಟ್ಟು: ಒಟ್ಟು ಮತಗಳು-1295, ಚಲಾಯಿತ ಮತಗಳು-811. ವಸಂತಿ (ಜೆಡಿಎಸ್+ಕಾಂಗ್ರೆಸ್ ಬೆಂಬಲಿತ) 228, ವಿದ್ಯಾವತಿ ಪ್ರಮೋದ್ ಕುಮಾರ್ (ಬಿಜೆಪಿ) 579, ನೋಟಾ 4. ಇವರಲ್ಲಿ ಬಿಜೆಪಿಯ ವಿದ್ಯಾವತಿ ಪ್ರಮೋದ್ ಕುಮಾರ್ 351 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 13 ಗೂಡಿನಬಳಿ: ಒಟ್ಟು ಮತಗಳು-972. ಚಲಾಯಿತ ಮತಗಳು-734. ನೆಫಿಸಾ ಹನೀಫ್ (ಕಾಂಗ್ರೆಸ್) 174, ಸಂಶದ್ (ಎಸ್‍ಡಿಪಿಐ) 436, ಕೌಸರ್ ಬಾನು (ಬಿಜೆಪಿ) 114, ನೋಟಾ 10. ಇವರಲ್ಲಿ ಎಸ್‍ಡಿಪಿಐನ ಸಂಶದ್ 262 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 14 ಜೋಡುಮಾರ್ಗ-ಕೈಕುಂಜೆ: ಒಟ್ಟು ಮತಗಳು-1631. ಚಲಾಯಿತ ಮತಗಳು-1139. ಬೂತ್ 1ರಲ್ಲಿ 535ರಲ್ಲಿ 357 ಚಲಾಯಿತ, ಬೂತ್ 2ರಲ್ಲಿ 1096ರಲ್ಲಿ 782 ಚಲಾಯಿತ. ಈ ಪೈಕಿ ಕೆ ಸುಗುಣ ಕಿಣಿ (ಬಿಜೆಪಿ) 357, ಶೆಹನಾಜ್ (ಕಾಂಗ್ರೆಸ್) 300, ಝೀನತ್ ಫಿರೋಜ್ (ಎಸ್‍ಡಿಪಿಐ) 477, ನೋಟಾ 6. ಇವರಲ್ಲಿ ಎಸ್‍ಡಿಪಿಐನ ಝೀನತ್ 120 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 15 ಎಪಿಎಂಸಿ-ಕೈಕುಂಜೆ: ಒಟ್ಟು ಮತಗಳು-963. ಚಲಾಯಿತ ಮತಗಳು-667. ಅರ್ಲ ಗೋವಿಂದ ಪ್ರಭು (ಬಿಜೆಪಿ) 353, ಲೋಕೇಶ್ ಸುವರ್ಣ (ಕಾಂಗ್ರೆಸ್) 313. ನೋಟಾ 3. ಬಿಜೆಪಿಯ ಅರ್ಲ ಗೋವಿಂದ ಪ್ರಭು 40 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. 

ವಾರ್ಡ್ 16 ನಂದರಬೆಟ್ಟು: ಒಟ್ಟು ಮತಗಳು-1334. ಚಲಾಯಿತ ಮತಗಳು-1046. ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್) 477, ಶಾಹುಲ್ ಹಮೀದ್ ಎಸ್.ಎಚ್ (ಎಸ್‍ಡಿಪಿಐ) 473, ಸಲಿಮ್ (ಬಿಜೆಪಿ) 88 ನೋಟಾ 8.  ಕಾಂಗ್ರೆಸ್‍ನ ಮುಹಮ್ಮದ್ ನಂದರಬೆಟ್ಟು 4 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 17 ಪರ್ಲಿಯಾ: ಒಟ್ಟು ಮತಗಳು-983. ಚಲಾಯಿತ ಮತಗಳು-394. ಅಬ್ದುಲ್ ಖಾದರ್ ಇಕ್ಬಾಲ್ (ಪಕ್ಷೇತರ) 170, ಲುಕ್ಮಾನ್ (ಕಾಂಗ್ರೆಸ್) 279, ಮುಹಮ್ಮದ್ ಇಕ್ಬಾಲ್ ಮದ್ದಾ (ಎಸ್‍ಡಿಪಿಐ) 200, ಅನಂತ ಕೃಷ್ಣ ನಾಯಕ್(ಬಿಜೆಪಿ) 106, ನೋಟಾ 1. ಕಾಂಗ್ರೆಸ್‍ನ ಲುಕ್ಮಾನ್ 79 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 18 ಶಾಂತಿ ಅಂಗಡಿ: ಒಟ್ಟು ಮತಗಳು-1081. ಚಲಾಯಿತ ಮತಗಳು-842. ಹಸೈನಾರ್ (ಕಾಂಗ್ರೆಸ್) 529, ಬಶೀರ್ ಪಲ್ಲ (ಎಸ್‍ಡಿಪಿಐ) 298, ಮಹೇಶ ಶೆಟ್ಟಿ (ಬಿಜೆಪಿ) 13. ನೋಟಾ 2. ಕಾಂಗ್ರೆಸ್‍ನ ಹಸೈನಾರ್ 231 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ವಾರ್ಡ್ 19 ಅದ್ದೇಡಿ: ಒಟ್ಟು ಮತಗಳು-965. ಚಲಾಯಿತ ಮತಗಳು-709. ಮುಹಮ್ಮದ್ ಶರೀಫ್ (ಕಾಂಗ್ರೆಸ್) 374, ಇಸಾಕ್ ಶಾಂತಿಯಂಗಡಿ (ಎಸ್‍ಡಿಪಿಐ) 327, ಶೇಕ್ ಶಾಹಿದ್ ಹುಸೇನ್ (ಬಿಜೆಪಿ) 7. ನೋಟಾ 1. ಕಾಂಗ್ರೆಸ್‍ನ ಮುಹಮ್ಮದ್ ಶರೀಫ್ 47 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ವಾರ್ಡ್ 20 ಮೊಡಂಕಾಪು: ಒಟ್ಟು ಮತಗಳು 1354 ಚಲಾಯಿತ ಮತಗಳು 941 ಲೋಲಾಕ್ಷ ಶೆಟ್ಟಿ (ಕಾಂಗ್ರೆಸ್) 498, ಲತೀಫ್ ಕೆ.ಚ್ (ಎಸ್‍ಡಿಪಿಐ) 40, ಎಂ. ಸತೀಶ್ ಶೆಟ್ಟಿ (ಬಿಜೆಪಿ) 400, ನೋಟಾ 5. ಕಾಂಗ್ರೆಸ್‍ನ ಲೋಲಾಕ್ಷ ಶೆಟ್ಟಿ 98 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ವಾರ್ಡ್ 21 ತಲಪಾಡಿ: ಒಟ್ಟು ಮತಗಳು 1641 ಚಲಾಯಿತ ಮತಗಳು 1262  ಬೂತ್ 1ರಲ್ಲಿ  759 ಮತದಾರರ ಪೈಕಿ 585, ಬೂತ್ 2ರಲ್ಲಿ 882 ಮತದಾರರ ಪೈಕಿ 677 ಮಂದಿ ಮತ ಚಲಾಯಿಸಿದ್ದಾರೆ. ರಾಮಕೃಷ್ಣ ಆಳ್ವ(ಕಾಂಗ್ರೆಸ್) 520, ರಾಮಣ್ಣ ಶೆಟ್ಟಿ (ಎಸ್.ಡಿ.ಪಿ.ಐ.) 420, ಪುಷ್ಪರಾಜ್ ಶೆಟ್ಟಿ (ಬಿಜೆಪಿ) 314 ನೋಟಾ 8. ಕಾಂಗ್ರೆಸ್ ನ ಪಿ.ರಾಮಕೃಷ್ಣ ಆಳ್ವ 100 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ವಾರ್ಡ್ 22  ಪಲ್ಲಮಜಲು: ಒಟ್ಟು ಮತಗಳು-1346. ಚಲಾಯಿತ ಮತಗಳು-997. ನಳಿನಾಕ್ಷಿ ಆನಂದ ಕುಲಾಲ್ (ಕಾಂಗ್ರೆಸ್) 431, ಚೈತನ್ಯ ಎ.ದಾಸ್ (ಬಿಜೆಪಿ) 544, ನೋಟಾ 22. ಬಿಜೆಪಿಯ ಚೈತನ್ಯಾ ಎ. ದಾಸ್ 103 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ವಾರ್ಡ್ 23 ಜೈನರಪೇಟೆ: ಒಟ್ಟು ಮತಗಳು-1272. ಚಲಾಯಿತ ಮತಗಳು-962. ಮುಹಮ್ಮದ್ ನಿಸಾರ್ (ಕಾಂಗ್ರೆಸ್) 258, ಇದ್ರೀಸ್ ಪಿ.ಜೆ (ಎಸ್‍ಡಿಪಿಐ) 391, ಲಕ್ಷಣ್ ರಾಜ್ ಪಿ.ವಿ (ಬಿಜೆಪಿ) 301, ಶಫೀಕ್ (ಜೆಡಿಎಸ್) 7, ನೋಟಾ 5. ಎಸ್‍ಡಿಪಿಐನ ಮುಹಮ್ಮದ್ ಇದ್ರಿಸ್ 90 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್ 24 ಆಲಡ್ಕ: ಒಟ್ಟು ಮತಗಳು-1307. ಚಲಾಯಿತ ಮತಗಳು-901. ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್) 583, ಯೂಸುಫ್ ಆಲಡ್ಕ (ಎಸ್‍ಡಿಪಿಐ) 176, ಜಿ ಜಿ. ಮುಹಮ್ಮದ್ (ಬಿಜೆಪಿ) 75, ಮುಹಮ್ಮದ್ ಅಮಾನುಲ್ಲಾ(ಜೆಡಿಎಸ್) 67, ನೋಟಾ 1. ಕಾಂಗ್ರೆಸ್‍ನ ಅಬುಬಕರ್ ಸಿದ್ದಿಕ್ ಗುಡ್ಡೆಯಂಗಡಿ 407 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ 25 ಬೋಳಂಗಡಿ: ಒಟ್ಟು ಮತಗಳು-1260. ಚಲಾಯಿತ ಮತಗಳು-787. ಜೆಸಿಂತಾ ಡಿಸೋಜ (ಕಾಂಗ್ರೆಸ್) 419, ಯಶೋಧಾ ಜಗನ್ನಾಥ (ಬಿಜೆಪಿ) 277, ಬಿ.ಎಸ್. ಖೈರುನ್ನೀಸ (ಜೆಡಿಎಸ್) 87, ನೋಟಾ 4. ಕಾಂಗ್ರೆಸ್‍ನ ಜೆಸಿಂತಾ ಡಿಸೋಜ 142 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ವಾರ್ಡ್ 26 ಮೆಲ್ಕಾರ್: ಒಟ್ಟು ಮತಗಳು-1349. ಚಲಾಯಿತ ಮತಗಳು-884. ಗಾಯತ್ರಿ ಪ್ರಕಾಶ್ (ಕಾಂಗ್ರೆಸ್) 485, ಉಷಾಲತಾ ಉಮೇಶ (ಬಿಜೆಪಿ) 393, ನೋಟಾ 6. ಕಾಂಗ್ರೆಸ್‍ನ ಗಾಯತ್ರಿ ಜೆ 92 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ವಾರ್ಡ್ 27 ಬೊಂಡಾಲ: ಒಟ್ಟು ಮತಗಳು-1382. ಚಲಾಯಿತ ಮತಗಳು-1085. ಬೂತ್ 1ರಲ್ಲಿ 713 ಮತಗಳಲ್ಲಿ 547 ಚಲಾಯಿತ ಹಾಗು ಬೂತ್ 2ರಲ್ಲಿ 669 ಮತಗಳ ಪೈಕಿ 538 ಚಲಾಯಿತ. ಸುರೇಶ್ ನಾಯ್ಕ (ಕಾಂಗ್ರೆಸ್) 432 ಜಯರಾಮ ನಾಯ್ಕ (ಬಿಜೆಪಿ) 647 ನೋಟಾ 8. ಬಿಜೆಪಿಯ ಜಯರಾಮ 215 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News