ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ದ.ಕ. ಜಿಲ್ಲೆಯ 20 ಶಿಕ್ಷಕರು ಆಯ್ಕೆ

Update: 2018-09-03 16:36 GMT

ಮಂಗಳೂರು, ಸೆ.3: ದ.ಕ. ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯ 20 ಮಂದಿ ಶಿಕ್ಷಕರು ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಏಳು ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆರು ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಏಳು ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಲಿದ್ದಾರೆ ಎಂದು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ:  ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ದಲ್ಲಿ ವಿಲ್ಮಾ ಸಿಕ್ವೇರಾ- ದ.ಕ. ಜಿಪಂ ಪ್ರಾಥಮಿಕ ಶಾಲೆ ಓಜಾಲ ಕುಳ ಗ್ರಾಮ (ಬಂಟ್ವಾಳ), ಸೀತಾರಾಮ- ಸ.ಕಿ.ಪ್ರಾ.ಶಾಲೆ ನೆತ್ತರ ಮಚ್ಚಿನ ಗ್ರಾಮ (ಬೆಳ್ತಂಗಡಿ), ಸೇಸಮ್ಮ- ಸ.ಕಿ.ಪ್ರಾ.ಶಾಲೆ ಕಲ್ಲಾಪುಪಟ್ಳ (ಮಂಗಳೂರು ದ.), ಅಶ್ವಿನಿ ಶೇಡ್ತಿ- ಸ.ಕಿ.ಪ್ರಾ.ಶಾಲೆ ಕಕ್ವ (ಮಂಗಳೂರು ಉ.), ಜ್ಯೋತಿ ಕೆ.- ಸ.ಕಿ.ಪ್ರಾ.ಶಾಲೆ ಕೇಮಾರು (ಮೂಡುಬಿದಿರೆ), ತಿಮ್ಮಪ್ಪ- ಸ.ಕಿ.ಪ್ರಾ.ಶಾಲೆ ಮಾಲೆತ್ತೋಡಿ (ಪುತ್ತೂರು), ಶಾಲಿನಿ ಎಂ.- ಸ.ಕಿ.ಪ್ರಾ.ಶಾಲೆ ಎಣ್ಣೆಮಜಲು (ಸುಳ್ಯ).

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:  ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಳಿನಾಕ್ಷಿ- ಸ.ಹಿ.ಪ್ರಾ.ಶಾಲೆ ಬೋಳಾರ ವೆಸ್ಟ್ (ಮಂಗಳೂರು ದ.), ಮೇರಿ ಡಿಸೋಜ- ಸಂತ ಲಾರೆನ್ಸ್ ಹಿ.ಪ್ರಾ.ಶಾಲೆ ಬೋಂದೆಲ್ (ಮಂಗಳೂರು ಉ.), ವಿನಯಕುಮಾರ ಎಂ.- ಸ.ಉ.ಹಿ.ಪ್ರಾ.ಶಾಲೆ ಕಲ್ಲಬೆಟ್ಟು (ಮೂಡುಬಿದಿರೆ), ಮುದರ ಬೈರ-ಸ.ಮಾ.ಮ.ಹಿ.ಪ್ರಾ.ಶಾಲೆ ಹಾರಾಡಿ (ಪುತ್ತೂರು), ಸರಸ್ವತಿ ಕೆ. ಸ.ಮಾ.ಮ.ಹಿ.ಪ್ರಾ.ಶಾಲೆ ಅರಂತೋಡು (ಸುಳ್ಯ), ಸಂಜೀವ ಎನ್.- ಸ.ಹಿ.ಪ್ರಾ.ಶಾಲೆ ಮಿತ್ತೂರು (ಬಂಟ್ವಾಳ).

ಪ್ರೌಢಶಾಲಾ ವಿಭಾಗ: ಪ್ರೌಢಶಾಲಾ ವಿಭಾಗದಲ್ಲಿ ರೋಶನ್ ಅಲೆಗ್ಸಾಂಡರ್ ಪಿಂಟೊ- ಕಾರ್ಮೆಲ್ ಪ್ರೌ.ಶಾಲೆ ಮೊಡಂಕಾಪು (ಬಂಟ್ವಾಳ), ಗೋಪಾಲಕೃಷ್ಣ ತುಳುಪುಳೆ- ಅನುದಾನಿತ ಪ್ರೌಢಶಾಲೆ ನಾರಾವಿ (ಬೆಳ್ತಂಗಡಿ), ಲಿಲ್ಲಿ ಪೈಸ್- ಸ.ಪ್ರೌಢಶಾಲೆ ಅತ್ತಾವರ (ಮಂಗಳೂರು ದ.), ಕೃಷ್ಣ ನಾಯಕ್- ವಿದ್ಯಾದಾಯಿನಿ ಪ್ರೌಢಶಾಲೆ ಸುರತ್ಕಲ್ (ಮಂಗಳೂರು ಉ.), ಬಾಲಕೃಷ್ಣ ಗೌಡ- ಸ.ಪ್ರೌಢಶಾಲೆ ಪ್ರಾಂತ್ಯ (ಮೂಡುಬಿದಿರೆ), ವನಿತಾಕುಮಾರಿ- ರಾಮಕೃಷ್ಣ ಪ್ರೌಢಶಾಲೆ ಪುತ್ತೂರು (ಪುತ್ತೂರು), ಚಿನ್ನಪ್ಪ ಗೌಡ ಎಂ.- ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ.) ಗಾಂಧಿನಗರ (ಸುಳ್ಯ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News