ಮುಂಬೈ ತಂಡದಿಂದ ಅಲಾರೆ ಗೋವಿಂದ ಕಾರ್ಯಕ್ರಮ

Update: 2018-09-03 16:44 GMT

ಉಡುಪಿ, ಸೆ.3: ಉಡುಪಿ ಶ್ರೀಕೃಷ್ಣ ಮಠದ ವಿಟ್ಲಪಿಂಡಿ ಉತ್ಸವದ ಪ್ರಯುಕ್ತ ಮುಂಬೈಯ ಯುವಪ್ರೇರಣಾ ತಂಡದಿಂದ ಮಠದ ರಥಬೀದಿ ಹಾಗೂ ನಗರದ ವಿವಿಧೆಡೆಗಳಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಾನವ ಪಿರಮಿಡ್ ಮೂಲಕ 50 ಅಡಿ ಎತ್ತರದಲ್ಲಿ ಮೊಸರು ಕುಡಿಕೆ ಒಡೆಯುವ ಅಲಾರೆ ಗೋವಿಂದ ಕಾರ್ಯಕ್ರಮ ಗಮನ ಸೆಳೆಯಿತು.

ಈ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಧ್ವಮಂಟಪದಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟೀಲು ದೇವಸ್ಥಾನದ ಅರ್ಚಕ ವಾಸುದೇವ ಅಸ್ರಣ್ಣ, ಕಾರ್ಯಕ್ರಮದ ಆಯೋಜಕರಾದ ಭುವನೇಂದ್ರ ಕಿದಿಯೂರು, ಮಧುಸೂಧನ ಪೂಜಾರಿ, ಹರಿಯಪ್ಪ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ನಂತರ 175 ಮಂದಿಯ ತಂಡವು ಬೆಳಗ್ಗೆಯಿಂದ ಸಂಜೆಯವರೆಗೆ ಉಡುಪಿ ಶ್ರೀಕೃಷ್ಣ ಮಠದ ಕನಕ ಗೋಪುರದ ಎದುರುಗಡೆ, ಕಡಿಯಾಳಿ, ಅಂಬಲಪಾಡಿ, ಜೋಡುಕಟ್ಟೆ, ಕೋರ್ಟ್ ರಸ್ತೆ, ಕಾಣಿಯೂರು ಮಠದ ಎದುರು, ಪೇಜಾವರ ಮಠದ ಎದುರು, ತ್ರೀವೆಣಿ ವೃತ್ತ, ಕಿದಿಯೂರು ಹೊಟೇಲ್ ಎದುರು 50 ಅಡಿ ಎತ್ತರದಲ್ಲಿ ಇರಿಸಲಾದ ಮೊಸರು ತುಂಬಿದ ಮಡಕೆಯನ್ನು ಮಾನವ ಪಿರಮಿಡ್ ರಚಿಸಿ ಒಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News