ಸುಳ್ಯ ಎಸ್ಸೆಸ್ಸೆಫ್‌ನಿಂದ ಪ್ರಳಯ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಪುಸ್ತಕ ಹಸ್ತಾಂತರ

Update: 2018-09-03 16:54 GMT

ಸುಳ್ಯ, ಸೆ.3: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಸುಳ್ಯ ಸೆಕ್ಟರ್ ವತಿಯಿಂದ ಪ್ರಳಯ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಸಂಗ್ರಹಿಸಿದ ನೋಟ್ ಪುಸ್ತಕ ಮತ್ತು ಪಠ್ಯೋಪಕರಣಗಳ ಹಸ್ತಾಂತರ ಸಮಾರಂಭ ಸೆ.2ರಂದು ಗಾಂಧಿನಗರ ಸುನ್ನಿ ಸೆಂಟರ್‌ನಲ್ಲಿ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಉಪಾಧ್ಯಕ್ಷ ಅಬ್ದುಲ್ಲ ಝುಹ್ರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷ ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷ ಹಾರಿಸ್ ಮಿಸ್ಬಾಹಿ ಪೈಂಬಚ್ಚಾಲ್ ವಿಷಯ ಮಂಡಿಸಿ ಭಾಷಣಗೈದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಉಪಾಧ್ಯಕ್ಷ ಫೈಝಲ್ ಝುಹ್ರಿ ಕಲ್ಲುಗುಂಡಿ ದುಆ ನೆರವೇರಿಸಿದರು.

ಇದೇ ಸಂದರ್ಭ ಸೆಕ್ಟರ್ ಸಮಿತಿ ಸಂಗ್ರಹಿಸಿದ ನೋಟ್ ಪುಸ್ತಕ ಮತ್ತು ಪಠ್ಯೋಪಕರಣಗಳನ್ನು ಸೆಕ್ಟರ್ ನಾಯಕರು ಡಿವಿಷನ್‌ನಾಯಕರಿಗೆ ಹಸ್ತಾಂತರಿಸಿದರು.

ಎಸ್‌ವೈಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಸುಳ್ಯ ಕೇಂದ್ರ ಜುಮಾ ಮಸೀದಿ ಪ್ರ. ಕಾರ್ಯದರ್ಶಿ ಹಾಜಿ ಐ. ಇಸ್ಮಾಯೀಲ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ ಪ್ರ. ಕಾರ್ಯದರ್ಶಿ ಹಸೈನಾರ್ ಜಯನಗರ, ಹನೀಫ್ ಬಿ.ಎಂ. ಜನತಾ, ಎಸ್‌ವೈಎಸ್ ಸುಳ್ಯ ಬ್ರಾಂಚ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಉಪಾಧ್ಯಕ್ಷ ಹಸೈನಾರ್‌ಗುತ್ತಿಗಾರು, ಕಾರ್ಯದರ್ಶಿ ಅಬ್ಬಾಸ್ ಎ.ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಸೆಕ್ಟರ್ ಪಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿದರು. ಮಾಲಿಕ್ ಕೊಯಂಗಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News