ಜಮೀಯತುಲ್ ಫಲಾಹ್ ಕಾಪು ಘಟಕ: ವಿದ್ಯಾರ್ಥಿ ವೇತನ ವಿತರಣೆ

Update: 2018-09-03 17:05 GMT

ಕಾಪು, ಸೆ. 3 : ಜಮೀಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲೆ ಕಾಪು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಕಾಪು ಜಮೀಯತುಲ್ ಫಲಾಹ್ ಕಚೇರಿಯಲ್ಲಿ ನಡೆಯಿತು.

ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಪು ತಾಲೂಕಿನ ಅರ್ಹ 63 ವಿದ್ಯಾರ್ಥಿಗಳಿಗೆ 1.20 ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ಶಭಿ ಅಹಮದ್ ಕಾಝಿ ಮಾತನಾಡಿ, ಕಾಪು ತಾಲ್ಲೂಕು ರಚನೆಯಾದ ಒಂದು ವರ್ಷದೊಳಗೆ ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸುವುದು ಒಂದು ದಾಖಲೆಯಾಗಿದೆ. ಪ್ರತೀ ವರ್ಷ ಇದನ್ನು ಮುಂದುವರಿಸುತಿದ್ದು. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಮಾಜ ಸೇವಕ ಲೀಲಾಧರ ಶೆಟ್ಟಿ, ಜಿದ್ದಾ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್, ಹಲೀಮಾ ಸಾಬ್ಜು ಅಡಿಟೋರಿಯಂನ ಮ್ಯಾನೇಜಿಂಗ್ ಡೈರೆಕ್ಟರ್ ಹಾಜಿ ಅಬ್ದುಲ್ ಜಲೀಲ್ ಉದ್ಯಾವರ ಭಾಗವಹಿಸಿದ್ದರು. ಶಫಿ ಅಹಮದ್ ಕರ್‍ಆನ್ ಪಠಿಸಿದರು. ಘಟಕದ ಉಪಾಧ್ಯಕ್ಷ ಮುಹಮ್ಮದ್ ಸಾಧಿಕ್ ಸ್ವಾಗತಿಸಿದರು. ಜಿದ್ದಾ ಎನ್‍ಆರ್‍ಸಿಸಿ ಘಟಕದ ಎಸ್.ಎಂ.ಜಾಫರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪತ್ರಿಕಾ ಕಾರ್ಯದರ್ಶಿ ಅನ್ವರ್ ಆಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ವಂದಿಸಿದರು. ಕೋಶಾಧಿಕಾರಿ ಮುಷ್ತಾಕ್ ಇಬ್ರಾಹಿಂ, ನಝೀರ್ ಅಹಮದ್, ಸಿರಾಜುದ್ದೀನ್ ಕಾಝಿ, ಅಫ್ಜಲ್ ಕಾಝಿ, ಶಾಬುದ್ದೀನ್ ಸಾಹೇಬ್, ಎಂ.ಎಂ.ಸಲೀಂ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News