ಬಾಲಕಿಯ ಪೋಷಕರ ಪತ್ತೆಗಾಗಿ ಮನವಿ

Update: 2018-09-03 17:11 GMT

ಮಂಗಳೂರು, ಸೆ.3: ಬಿ.ಸಿ.ರೋಡ್ ಶಶಿಧರ ಪೂಜಾರಿ ಮತ್ತು ಶಾಂತಿ ದಂಪತಿಯ ಪುತ್ರಿ ನಯನಾ (9) ಕಲಬುರಗಿಯಲ್ಲಿ ಪತ್ತೆಯಾಗಿದ್ದು, ಕಲಬುರಗಿ ಮಕ್ಕಳ ಕಲ್ಯಾಣ ಸಮಿತಿಯಿಂದ ದ.ಕ. ಮಕ್ಕಳ ಕಲ್ಯಾಣ ಸಮಿತಿಗೆ ಪ್ರಕರಣ ವರ್ಗಾಯಿಸಲಾಗಿದೆ.

ಪ್ರಸ್ತುತ ನಗರದ ಶಿವಭಾಗ್ ಇಂಚರ ಮಕ್ಕಳ ಮನೆಯಲ್ಲಿ ಬಾಲಕಿಯನ್ನು ದಾಖಲಿಸಲಾಗಿದೆ. ಈ ಬಾಲಕಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿ 1ನೇ ಮಹಡಿ ದ.ಕ. ಜಿಲ್ಲೆ, ಮಂಗಳೂರು ದೂ.ಸಂ.: 0824-2440004/ 9482756407ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News