×
Ad

ಕಥೊಲಿಕ್ ಸಭಾ ಬೊಂದೆಲ್‌ನಿಂದ ಪ್ರತಿಭಾ ಪುರಸ್ಕಾರ

Update: 2018-09-03 22:49 IST

ಮಂಗಳೂರು, ಸೆ. 3: ಕಥೊಲಿಕ್ ಸಭಾ ಬೊಂದೆಲ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವೃತ್ತಿಪರ ದಿನವನ್ನು ಆಚರಿಸಲಾಯಿತು. ಎಸೆಸೆಲ್ಸಿ, ಪಿಯುಸಿ ಹಾಗೂ ಡಿಗ್ರಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ 47 ವಿದ್ಯಾರ್ಥಿಗಳನ್ನು ಹಾಗೂ ಅವರ ಹೆತ್ತವರನ್ನು ಈ ಸಮಯದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರನ್ನು ಹಾಗೂ ವಿವಿಧ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಇಂಜಿನಿಯರ್ಸ್‌, ಉದ್ಯಮಿಗಳು ಹಾಗೂ ಸರಕಾರಿ ನೌಕರರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಡೆದ ಅಕಿಲ ಭಾರತ ಕಥೊಲಿಕ್ ಒಕ್ಕೂಟದ ಅಧ್ಯಕ್ಷರಾಗಿ ದ್ವಿತಿಯ ಬಾರಿಗೆ ಆಯ್ಕೆಯಾದ ಲ್ಯಾನ್ಸಿ ಡಿಕುನ್ಹಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ. ಆ್ಯಂಡ್ರು ಲಿಯಾ ಡಿಸೋಜ ಹಾಗೂ ಮುಖ್ಯ ಅತಿಥಿಗಳಾಗಿ ವಾಲ್ಟರ್ ಡಿಸೋಜ ಹಾಗೂ ವಂ. ಲಿಯಾ ವೇಗಸ್ ಭಾಗವಹಿಸಿವದ್ದರು. ವಿಕ್ಟರ್ ಕೊರೆಯಾ, ಪ್ರಾನ್ಸಿಸ್ ವೇಗಸ್ ವೇದಿಕೆಯಲ್ಲಿ ಹಾಜರಿದ್ದರು. ಈ ಕಾರ್ಯಕ್ರಮವನ್ನು ಘಟಕ ಅಧ್ಯಕ್ಷ ವಿಲ್ಫ್ರೆಡ್ ಅಲ್ವಾರಿಸ್ ಹಾಗೂ ಪ್ರೀತಿ ಡಿಸೋಜ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News