ಮೊದಲ ದಿನ ಆಳ್ವಾಸ್‍ನಿಂದ 6 ಸಹಿತ ಒಟ್ಟು 8 ನೂತನ ಕೂಟ ದಾಖಲೆ

Update: 2018-09-03 17:51 GMT

ಮೂಡುಬಿದಿರೆ, ಸೆ. 3: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮೂರು ದಿನಗಳ ಕಾಲ  ನಡೆಯುವ ರಾಜ್ಯ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2018ರಲ್ಲಿ ಮೊದಲ ದಿನ ಆಳ್ವಾಸ್‍ನ 6 ಕ್ರೀಡಾಪಟುಗಳು ಸಹಿತ ಒಟ್ಟು 8 ನೂತನ ಕೂಟ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.

18 ವರ್ಷ ಒಳಗಿನ ಹುಡುಗರ ವಿಭಾಗದ ಡಿಸ್ಕಸ್ ತ್ರೋನಲ್ಲಿ ಮೂಡುಬಿದಿರೆ ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್‍ನ ನಾಗೇಂದ್ರ ಅಣ್ಣಪ್ಪ ನಾಯ್ಕ್ (50.69 ಮೀ),  ಬಾಲಕಿಯರ ವಿಭಾಗದ ಹೈಜಂಪ್‍ನಲ್ಲಿ ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್‍ನ ಸುಪ್ರಿಯಾ (1.75ಮೀ), 20 ವರ್ಷದೊಳಗಿನ ಪುರುಷರ 800ಮೀ ಓಟದಲ್ಲಿ ಆಳ್ವಾಸ್‍ನ ಶಶಿಧರ್ ಬಿ.ಎಲ್ (1:53.7), ಪುರುಷರ ವಿಭಾಗದ ತ್ರಿಪಲ್ ಜಂಪ್‍ನಲ್ಲಿ ಆಳ್ವಾಸ್‍ನ ಸಂದೇಶ್ ಶೆಟ್ಟಿ (15.54ಮೀ), 20 ವರ್ಷದೊಳಗಿನ ಪುರುಷರ ವಿಭಾಗದ ಜಾವೆಲಿನ್ ತ್ರೋನಲ್ಲಿ ಆಳ್ವಾಸ್‍ನ ಮನು ಡಿ.ಪಿ (66.82ಮೀ), 20 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಪೋಲ್‍ವಾಲ್ಟ್‍ನಲ್ಲಿ ಆಳ್ವಾಸ್‍ನ ಯೋಗೀಶ್ (3.80ಮೀ), 20 ವರ್ಷದೊಳಗಿನ ಪುರುಷರ ಶಾಟ್‍ಫುಟ್‍ನಲ್ಲಿ ಮೈಸೂರು ಜಿಲ್ಲಾ ಮನೂಷ್ ಬಿ. (17.70ಮೀ) ಹಾಗೂ 20ವರ್ಷದೊಳಗಿನ ಮಹಿಳೆಯರ ವಿಭಾಗದ 100ಮೀ ಓಟದಲ್ಲಿ ಏಥ್ಲಾನ್ ಫ್ಲೀಟ್ ಓಲಂಪಸ್‍ನ ಸ್ನೇಹಾ ಪಿ.ಜೆ ಅವರು 11.2 ಸೆಕುಂಡ್‍ನಲ್ಲಿ ಕ್ರಮಿಸಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News