ನಿಷೇಧಿತ ಔಷಧ ಮಾರಾಟ ಪ್ರಕರಣ: ಮೆಡಿಕಲ್ ಶಾಪ್ ಪರವಾನಿಗೆ ರದ್ದು

Update: 2018-09-03 18:11 GMT

ಮಂಗಳೂರು, ಸೆ. 3: ವೈದ್ಯರ ಚೀಟಿ ಇಲ್ಲದೆ ಮತ್ತು ಬರಿಸುವ ಔಷಧ ಮಾರಾಟ ಮಾಡಿದ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆ ಸಂಸ್ಥೆಯ ಪರವಾನಿಗೆಯನ್ನು ಔಷಧ ನಿಯಂತ್ರಣ ಇಲಾಖೆ ರದ್ದುಗೊಳಿಸಿ ಆದೇಶ ಹೊರಡಿದೆ.

ಪ್ರಕರಣದ ವಿವರ: ಜು.18ರಂದು ನಗರದ ಪಿವಿಎಸ್ ಸಮೀಪದ ಪಿ.ಕೆ. ಹೆಲ್ತ್‌ಕ್ಯೂರ್ ಮೆಡಿಕಲ್ ಶಾಪ್‌ನಲ್ಲಿ  ವೈದ್ಯರ ಚೀಟಿ ಇಲ್ಲದೇ ಮತ್ತು ಬರಿಸುವ ಔಷಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉರ್ವ ಪೊಲೀಸ್ ಠಾಣೆ ನಿರೀಕ್ಷಕರು ಹಾಗೂ ಮಂಗಳೂರು ಪೂರ್ವ ಠಾಣೆ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ದಾಳಿ ನಡೆಸಿ, ನಿಷೇಧಿತ ಔಷಧ ವಶಪಡಿಸಿಕೊಂಡಿದ್ದರು.

ಈ ಕುರಿತು ಮೆಡಿಕಲ್ ಶಾಪ್ ಮಾಲಕರ ವಿರುದ್ಧ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆಯ ಸಮಯ ಪಿ.ಕೆ. ಕ್ಯೂರ್ ಮೆಡಿಕಲ್ ಶಾಪ್‌ನವರು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ- 1940 ಮತ್ತು ನಿಯಮಾವಳಿಗಳು 1945ರಡಿ ನಿಯಮ 65 ‘ಎ’ ರಲ್ಲಿನ ಉಪನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿದ್ದುದು ದೃಢಪಟ್ಟ ಕಾರಣ ಆ.31ರಂದು ಸಂಸ್ಥೆಯ ಪರವಾನಿಗೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News