ಜಮ್ಮುಕಾಶ್ಮಿರ: ಎಂಬಿಎ ಪದವೀಧರ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆ

Update: 2018-09-04 14:03 GMT

 ದೋಡಾ (ಜಮ್ಮುಕಾಶ್ಮೀರ), ಸೆ. 4: ಜಮ್ಮು ಹಾಗೂ ಕಾಶ್ಮೀರದ ದೋಡಾ ಜಿಲ್ಲೆಯ ಎಂಬಿಎ ಪದವೀಧರ ಯುವಕನೋರ್ವ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿ ದ್ದಾನೆ. ಆದರೆ, ಆತನ ಕುಟುಂಬದವರು ಹಿಂಸೆ ತ್ಯಜಿಸಿ ಹಿಂದಿರುಗುವಂತೆ ಯುವಕನಲ್ಲಿ ಮನವಿ ಮಾಡಿದ್ದಾರೆ.

 ಹಾರೂನ್ ಅಬ್ಬಾಸ್ ವಾನಿ ಎಂದು ಗುರುತಿಸಲಾದ ಯುವಕ ಕತ್ರಾ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದು, ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದಾಗ್ಯೂ, ವಾನಿ ಸೆಪ್ಟಂಬರ್ 1ರಂದು ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್‌ಗೆ ಸೇರಿದ್ದ. ವಾನಿ ಎ.ಕೆ. 47 ಬಂದೂಕು ಹಿಡಿದುಕೊಂಡ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಆತನ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ ಹಾಗೂ ಹಿಂಸೆ ತ್ಯಜಿಸಿ ಹಿಂದಿರುಗುವಂತೆ ಮನವಿ ಮಾಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿರುವ ವಾನಿ ಮಾವ ಫಾರೂಕ್ ವಾನಿ, ‘‘ಆತನ ಚಿತ್ರಗಳನ್ನು ನೋಡಿ ನಮಗೆ ಶಾಕ್ ಆಯಿತು. ಕತ್ರಾ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದ ಹಾರೂನ್ ಪ್ರತಿಭಾವಂತ ವಿದ್ಯಾರ್ಥಿ. ಆತ ಜಮ್ಮುವಿನಲ್ಲಿರುವ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ನಾವು ಅಂತಹ ಜನರಲ್ಲ. ಮನೆಗೆ ಹಿಂದಿರುಗುವಂತೆ ನಾವು ಮನವಿ ಮಾಡಿದ್ದೇವೆ’’ ಎಂದಿದ್ದಾರೆ.

‘‘ಆತ ಅಂತಹ ವ್ಯಕ್ತಿ ಅಲ್ಲ. ಆತನ ನಿರ್ಧಾರ ಸರಿಯಾದುದು ಅಲ್ಲ. ನಿಜವಾದ ಜಿಹಾದ್ ವೃದ್ಧಾಪ್ಯದಲ್ಲಿರುವ ಹೆತ್ತವರನ್ನು ನೋಡಿಕೊಳ್ಳುವುದು. ಆತ ತಾಯಿಯನ್ನು ನೋಡಿಕೊಳ್ಳಬೇಕು. ಅವರು ಅಸೌಖ್ಯದಿಂದ ಬಳಸಲುತ್ತಿದ್ದಾರೆ’’ ಎಂದು ಇನ್ನೋರ್ವ ಸಂಬಂಧಿಕ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News