×
Ad

ಒಂದು ವರ್ಷದಲ್ಲಿ 120 ಸಹೋದರಿಯರಿಗೆ ದಾಂಪತ್ಯ ಭಾಗ್ಯ ಕಲ್ಪಿಸಿದ ‘ನಂಡೆ ಪೆಂಙಳ್’

Update: 2018-09-04 19:40 IST

ಮಂಗಳೂರು, ಸೆ. 4: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸಾರಥ್ಯದಲ್ಲಿ ನಡೆಯುತ್ತಿರುವ 30 ವರ್ಷ ಮೀರಿದ ಯುವತಿಯರ ಮದುವೆ ಯೋಜನೆ ‘ನಂಡೆ ಪೆಂಙಳ್’ ಒಂದು ವರ್ಷದಲ್ಲಿ 120 ಯುವತಿಯರಿಗೆ ದಾಂಪತ್ಯ ಭಾಗ್ಯ ಕಲ್ಪಿಸಿದ್ದು, 4 ಫಲಾನುಭವಿಗಳಿಗೆ ಸಹಾಯ ವಿತರಣಾ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ  ಸಚಿವ ಯು.ಟಿ ಖಾದರ್,  ಯೆನೆಪೊಯ ಅಬ್ದುಲ್ಲ ಕುಂಞಿ, ಹಾಜಿ ಎಸ್.ಎಂ ರಶೀದ್, ಜಮಿಯ್ಯತುಲ್ ಫಲಾಹ್ ಸ್ಥಾಪಕರಾದ ಇಕ್ಬಾಲ್ ಯೂಸುಫ್, ಜಮಿಯ್ಯತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಸಿಟಿ ಬಿಲ್ಡರ್ಸ್ ಆಡಳಿತ ನಿರ್ದೇಶಕ ರಿಯಾಝ್, ಮುಸ್ತಫಾ, ಮುಬೀನ್ ಕೃಷ್ಣಾಪುರ, ಫತೇ ಮುಹಮ್ಮದ್ ಪುತ್ತಿಗೆ, ಅಫೀಖ್ ಹುಸೈನ್, ಅಬ್ದುಲ್ ರಹೀಮ್, ಮುಸ್ತಫಾ ಇಂಜಿನಿಯರ್ ಅಡ್ಡೂರು, ಹನೀಫ್ ಸಾಗರ್, ಫಕ್ರುದ್ದೀನ್, ಮಾಸ್ಟರ್ ಫ್ಲವರ್ಸ್, ಹನೀಫ್ ಪುತ್ತೂರು, ಖಾಲಿದ್ ತಣ್ಣೀರುಬಾವಿ, ನೌಷಾದ್ ಹಾಜಿ ಸೂರಲ್ಪಾಡಿ, ಅಸ್ಗರ್ ಹಾಜಿ, ಬಿ.ಎಂ ಮುಮ್ತಾಝ್ ಅಲಿ ಕೃಷ್ಣಾಪುರ,  ಅಶ್ರಫ್ ಕರ್ನಿರೆ, ಮನ್ಸೂರ್ ಅಹಮದ್, ಅಬ್ದುಲ್ ರವೂಫ್ ಪುತ್ತಿಗೆ, ಮುಹಮ್ಮದ್ ಹಾರಿಸ್, ನಿಸಾರ್ ಮುಹಮ್ಮದ್, ಸುಲೈಮಾನ್ ಶೇಖ್ ಬೆಳುವಾಯಿ, ರಿಯಾಝ್ ಕಣ್ಣೂರು, ನಕಾಶ್ ಬಾಂಬಿಲ ಮೊದಲಾದವರು ಉಪಸ್ಥಿತರಿದ್ದರು.

ನಂಡೆ ಪೆಂಙಳ್ ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನಂಡೆ ಪೆಂಙಳ್ ಯೋಜನೆಯ 4 ಮಂದಿ ಫಲಾನುಭವಿಗಳಿಗೆ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ಹಸ್ತಾಂತರಿಸಲಾಯಿತು.

‘ನಂಡೆ ಪೆಂಙಳ್’ ಯೋಜನೆ ಪ್ರಾರಂಭದ ಮೊದಲು 168 ಮದುವೆಗೆ ಟ್ಯಾಲೆಂಟ್ ವತಿಯಿಂದ ಅಗತ್ಯ ಸಹಕಾರವನ್ನು ನೀಡಲಾಗಿತ್ತು. ‘ನಂಡೆ ಪೆಂಙಳ್’ ಅಭಿಯಾನದಡಿಯಲ್ಲಿ ಒಂದು ವರ್ಷ ಅವಧಿಯಲ್ಲಿ 121 ಮದುವೆ ನಡೆದಿದೆ. ಇದರಲ್ಲಿ ಮಂಗಳೂರು ತಾಲೂಕಿನ 49, ಬಂಟ್ವಾಳ 37, ಪುತ್ತೂರು 18, ಬೆಳ್ತಂಗಡಿ 15 ಮತ್ತು ಸುಳ್ಯ 2 ಹೀಗೆ ಒಟ್ಟು 121 ಯುವತಿಯರಿಗೆ ದಾಂಪತ್ಯ ಭಾಗ್ಯ ಲಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News