ಉಡುಪಿ: ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿವರು
ಉಡುಪಿ, ಸೆ. 4: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಿದೆ. ಪ್ರಾಥಮಿಕ ಶಾಲಾ ವಿಭಾಗದಿಂದ ಸರಳೆಬೆಟ್ಟು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬೇಬಿ ಬಿ. ಹಾಗೂ ಪ್ರೌಢ ಶಾಲಾ ವಿಭಾಗದಿಂದ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಆಯುರ್ವೇದಭೂಷಣ ಎಂ.ವಿ.ಶಾಸ್ತ್ರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ.ಎನ್.ಪ್ರಕಾಶ್ ರಾವ್ ಇವರೇ ಜಿಲ್ಲೆಯಿಂದ ಆಯ್ಕೆಯಾದ ಶಿಕ್ಷಕರು.
ಬೇಬಿ ಬಿ.: ಮಣಿಪಾಲ ಸಮೀಪದ ಸರಳೆಬೆಟ್ಟು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಬಿ ಬಿ. ಅವರು ಕಳೆದ 18 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿದ್ದಾರೆ. ಇದಕ್ಕೂ ಮುನ್ನ ಅವರು 18 ವರ್ಷ ಕಾರ್ಕಳ ತಾಲೂಕು ಕುಗ್ರಾಮವಾದ ಮಾಳ ಚೌಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ, ಅನಂತರ ಮುಖ್ಯಶಿಕ್ಷಕಿಯಾಗಿದ್ದರು. ಒಂದು ವರ್ಷ ಬ್ರಹ್ಮಾವರದ ಹೇರೂರು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.
ಮಣಿಪಾಲ ಸಮೀಪದ ಸರಳೆಬೆಟ್ಟು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಬಿ ಬಿ. ಅವರು ಕಳೆದ 18 ವರ್ಷಗಳಿಂದ ಮುಖ್ಯ ಶಿಕ್ಷಕಿ ಯಾಗಿದ್ದಾರೆ. ಇದಕ್ಕೂ ಮುನ್ನ ಅವರು 18 ವರ್ಷ ಕಾರ್ಕಳ ತಾಲೂಕು ಕುಗ್ರಾಮವಾದ ಮಾಳ ಚೌಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ, ಅನಂತರ ಮುಖ್ಯಶಿಕ್ಷಕಿಯಾಗಿದ್ದರು. ಒಂದು ವರ್ಷ ಬ್ರಹ್ಮಾವರದ ಹೇರೂರು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ರೋಟರಿ, ಲಯನ್ಸ್, ಟ್ಯಾಪ್ಮಿ ಪ್ರಾಧ್ಯಾಪಕರ ಸಹಕಾರದಿಂದ ಬೇಬಿ ಅವರು ಸರಳೆಬೆಟ್ಟು ಶಾಲೆಯಲ್ಲಿ ಮೈದಾನ, ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯವನ್ನು ಒದಗಿಸಿದ್ದಾರೆ. ಮಣಿಪಾಲಕ್ಕೆ ತಾಗಿಕೊಂಡೇ ಇರುವ ಇವರ ಶಾಲೆ ಸುತ್ತಮುತ್ತ ಆಂಗ್ಲ ಮಾಧ್ಯಮ ಶಾಲೆ ಇದ್ದರೂ ಈ ಶಾಲೆಯಲ್ಲಿ 110 ಮಕ್ಕಳು ಕಲಿಯುತ್ತಿದ್ದಾರೆ.
ಮಣಿಪಾಲ ಪ್ರಗತಿನಗರದಲ್ಲಿ ಕೂಲಿಕಾರ್ಮಿಕರ ಮಕ್ಕಳಿಗಾಗಿ ಟೆಂಟ್ ಶಾಲೆಯನ್ನು ನಡೆಸಿದ್ದಲ್ಲದೆ ಸುತ್ತಮುತ್ತಲಿನ ಮಕ್ಕಳು ಶಾಲೆಗೆ ಬರುವಂತೆ ವಿಶೇಷ ಪ್ರಯತ್ನ ಮಾಡುತಿದ್ದಾರೆ. ಚೈತ್ರ ಚಿಗುರಿನಂತಹ ಅನೇಕ ಶೈಕ್ಷಣಿಕ ಚಟುವಟಿಕೆ ಗಳನ್ನೂ ನಡೆಸುತ್ತಿದ್ದಾರೆ. ಸರಳೆಬೆಟ್ಟು ಶಾಲೆ ದಾನಿಗ ನೆರವಿನಿಂದ ಸೋಲಾರ್ ಶಾಲೆಯಾಗಿದೆ.
ಮಣಿಪಾಲ ಪ್ರಗತಿನಗರದಲ್ಲಿ ಕೂಲಿಕಾರ್ಮಿಕರ ಮಕ್ಕಳಿಗಾಗಿ ಟೆಂಟ್ ಶಾಲೆಯನ್ನು ನಡೆಸಿದ್ದಲ್ಲದೆ ಸುತ್ತಮುತ್ತಲಿನ ಮಕ್ಕಳು ಶಾಲೆಗೆ ಬರುವಂತೆ ವಿಶೇಷ ಪ್ರಯತ್ನ ಮಾಡುತಿದ್ದಾರೆ. ಚೈತ್ರ ಚಿಗುರಿನಂತಹ ಅನೇಕ ಶೈಕ್ಷಣಿಕ ಚಟುವಟಿಕೆ ಗಳನ್ನೂ ನಡೆಸುತ್ತಿದ್ದಾರೆ. ಸರಳೆಬೆಟ್ಟು ಶಾಲೆ ದಾನಿಗಳ ನೆರವಿನಿಂದ ಸೋಲಾರ್ ಶಾಲೆಯಾಗಿದೆ. ‘ಶಾಲೆಯ ಶಿಕ್ಷಕರು, ದಾನಿಗಳು, ಪೋಷಕರು ಹಾಗೂ ಎಸ್‌ಡಿಎಂಸಿಯವರ ಸಹಕಾರದಿಂದ ಇಂತಹ ಪ್ರಯತ್ನಗಳನ್ನು ನಡೆಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಸಾಸ್ತಾನದ ಪಾಂಡೇಶ್ವರ ಮೂಲದ ಬೇಬಿಯವರು.
ಇನ್ನಾ ಪ್ರಕಾಶ್ ರಾವ್: ಪ್ರೌಢ ಶಾಲಾ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾ ಗಿರುವ ಇನ್ನಾ ಪ್ರಕಾಶ್ ರಾವ್ ಅವರು ಕಳೆದ ಸುಮಾರು ಮೂರು ದಶಕಗಳಿಗೂ ಅಧಿಕ ಸಮಯದಿಂದ ಇನ್ನಾ ಗ್ರಾಮದ ಆಯುರ್ವೇದಭೂಷಣ ಎಂ.ವಿ.ಶಾಸ್ತ್ರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಕಾರ್ಕಳ ತಾಲೂಕು ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿರುವ ಇವರು, ಆಂಗ್ಲ ಭಾಷಾ ಬೋಧನೆಯಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿದ್ದಾರೆ. ದಾನಿಗಳ ನೆರವಿನಿಂದ ಶಾಲೆಯ ವಿಶೇಷ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ದೂರದೂರುಗಳಿಂದ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
ಪ್ರಕಾಶ್ ರಾವ್ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಶೈಕ್ಷಣಿಕ ಸಮ್ಮಿಲ, ತಾಲೂಕು ಕ್ರೀಡಾಕೂಟಗಳನ್ನು ಆಯೋಜಿಸಿದ್ದಾರೆ.