​ಸಾಲಿಗ್ರಾಮ ಪ.ಪಂ.: ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ

Update: 2018-09-04 15:01 GMT

 ಉಡುಪಿ, ಸೆ.4: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳಲ್ಲಿ ಬಿಜೆಪಿ ಈ ಬಾರಿ 10 ಸ್ಥಾನಗಳನ್ನು ಜಯಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಕಾಂಗ್ರೆಸ್ ಐದು ವಾರ್ಡುಗಳಲ್ಲಿ ಜಯ ಪಡೆದರೆ, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದಾರೆ.

ಕಳೆದ ಬಾರಿ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ಹಾಗೂ ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು. ಮೀಸಲಾತಿಯ ಕಾರಣದಿಂದ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿ ಕೊನೆಯ ಎರಡೂವರೆ ವರ್ಷಗಳಲ್ಲಿ ತಾನೇ ಅಧಿಕಾರವನ್ನು ನಡೆಸಿತ್ತು.

ಫಲಿತಾಂಶ:

 1.ಪಡುಕೆರೆ (ಹಿಂ.ವರ್ಗ ಎ ಮಹಿಳೆ):ರೇಖಾ ಕೇಶವ (ಬಿ)-401, ಉಷಾ ಶಂಕರ್ ಪೂಜಾರಿ (ಕಾ)-288, ಸಾವಿತ್ರಿ (32). 2.ವಿಷ್ಣುಮೂರ್ತಿ (ಸಾಮಾನ್ಯ ಮಹಿಳೆ): ಅನುಸೂಯ ಆನಂದ ಹೇರ್ಳೆ(ಬಿ)-406, ಸುಮಾ ಚಂದ್ರಪೂಜಾರಿ(ಕಾ)-97, 3.ಗೆಂಡೆಕೆರೆ (ಸಾಮಾನ್ಯ): ಶ್ರೀನಿವಾಸ ಅಮೀನ್(ಕಾ)-381, ಉಮಾದೇವಿ(ಬಿ)-186, ನಾಗರಾಜ್(ಜೆಡಿಎಸ್) -30, ಎಸ್.ನಾಗೇಶ್ ಹೆಗ್ಡೆ(ಪ)-73, 4. ತೋಡಕಟ್ಟು (ಹಿಂ.ವರ್ಗ ಎ): ಪುನೀತ್ ಪೂಜಾರಿ(ಕಾ)-355, ಕರುಣಾಕರ ಪೂಜಾರಿ(ಬಿ)-354, ಶಿವರಾಜ್ (ಜೆಡಿಎಸ್)-65, 5.ಕಾರ್ತಟ್ಟು(ಸಾಮಾನ್ಯ): ಶ್ಯಾಮಸುಂದರ್ ನಾಯರಿ(ಬಿ)- 286, ಮಹಾಬಲ

ಮಡಿವಾಳ(ಕಾ)-258, ಉಮೇಶ್ ನಾಯರಿ(ಪ)-26, 6.ಮಾರಿಗುಡಿ(ಹಿಂ.ವರ್ಗ ಬಿ): ಸುಕನ್ಯ ಜೆ.ಶೆಟ್ಟಿ (ಬಿ)- 382, ಸೂರ್ಯಕಾಂತ ಶೆಟ್ಟಿ (ಕಾ)-301, ಚಂದ್ರಶೇಖರ್ ಶೆಟ್ಟಿ (ಜೆಡಿಎಸ್)-17, 7.ಪೇಟೆ(ಹಿಂ.ವರ್ಗ ಎ ಮಹಿಳೆ): ರತ್ನಾ ನಾಗರಾಜ್ ಗಾಣಿಗ (ಪಕ್ಷೇತರ)-170, ತನುಜಾ ಸಂಪತ್ (ಬಿ)-146, ಕುಸುಮಾ ಬಸವ ಪೂಜಾರಿ(ಕಾ)-40, ವಸುಮತಿ ಕೆ.(ಜೆಡಿಎಸ್)-35. 8.ಬಡಾಹೋಳಿ(ಪ. ಜಾ.): ಗಣೇಶ್ (ಕಾ)-281, ಕೆ.ರಾಘವೇಂದ್ರ (ಬಿ)-213, ಪ್ರದೀಪ್ ಕೆ. (ಪ)-129.

 9.ಮೂಡೋಳಿ(ಸಾಮಾನ್ಯ): ಸಂಜೀವ ದೇವಾಡಿಗ(ಬಿ)-321, ಅಚ್ಯುತ್ ಪೂಜಾರಿ(ಕಾ)-213, ರಾಮ(ಸಿಪಿಐ)-19, ಭರತ್(ಪ)-7. 10. ತೆಂಕು ಹೋಳಿ (ಸಾಮಾನ್ಯ ಮಹಿಳೆ): ಗಿರಿಜ (ಬಿ)-334, ಮೇಘ ಕೆ.(ಕಾ)-236. 11.ಪಡುಹೋಳಿ( ಹಿಂ.ವರ್ಗಎ): ಕಾರ್ಕಡ ರಾಜು ಪೂಜಾರಿ(ಬಿ)- 405, ರಘು ಭಂಡಾರಿ (ಕಾ)-111, ಕೃಷ್ಣ ಪೂಜಾರಿ(ಪ)-73. 12.ಭಗವತಿ (ಪ.ಪಂ.): ಆನಂದ (ಬಿ)-397, ಸುನೀತಾ (ಕಾ)-207. 13.ಪಾತಾಳ ಬೆಟ್ಟು (ಸಾಮಾನ್ಯ): ರವೀಂದ್ರ ಕಾಮತ್ (ಕಾ)-415, ಉದಯ ಪೂಜಾರಿ (ಬಿ)-296, ಅರುಣ್(ಜೆಡಿಎಸ್)-33.

14.ದೊಡ್ಮನೆಬೆಟ್ಟು(ಸಾಮಾನ್ಯ ಮಹಿಳೆ): ಸುಲತಾ ಎಸ್.ಹೆಗ್ಡೆ(ಬಿ)-334, ವಿಮಲ(ಕಾ)-301. 15. ಚೆಲ್ಲಮಕ್ಕಿ (ಸಾಮಾನ್ಯ ಮಹಿಳೆ): ಜಾಹಿರಾ(ಕಾ)-209, ಅನಿತ ಶ್ರೀಧರ (ಬಿ)-190, ಗಿರಿಜ(ಪ)-106.16.ಯಕ್ಷಮಠ(ಸಾಮಾನ್ಯ): ಭಾಸ್ಕರ್ ಬಂಗೇರ (ಬಿ)-264, ದಿನೇಶ್ ಬಂಗೇರ(ಕಾ)-189.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News