ಇಮ್ರಾನ್ ಪಕ್ಷದ ಆರಿಫ್ ಆಲ್ವಿ ಪಾಕಿಸ್ತಾನದ ನೂತನ ಅಧ್ಯಕ್ಷ

Update: 2018-09-04 15:30 GMT

ಇಸ್ಲಾಮಾಬಾದ್, ಸೆ. 4: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ರ ಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ)ನ ಸ್ಥಾಪಕ ಸದಸ್ಯರ ಪೈಕಿ ಓರ್ವರಾಗಿರುವ ಡಾ. ಅರೀಫ್ ಆಲ್ವಿ ಮಂಗಳವಾರ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅವರು ತ್ರಿಕೋನ ಸ್ಪರ್ಧೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಅಭ್ಯರ್ಥಿ ಐತ್‌ಝಾಜ್ ಅಹ್ಸಾನ್ ಮತ್ತು ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಮೌಲಾನಾ ಫಝ್ಲರ್ರಹ್ಮಾನ್‌ನ್ನು ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News